Select Your Language

Notifications

webdunia
webdunia
webdunia
webdunia

ಕಾದು ಕಾದು ಸುಸ್ತಾಗಿರುವ ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ಕೊಡಲಿದ್ದಾರೆ ಕಿಚ್ಚ ಸುದೀಪ್

Kiccha Sudeep

Sampriya

ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2024 (17:32 IST)
Photo Courtesy X
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಒಂದೆಡೆ ಅವರ ನಿರೂಪಣೆಯಲ್ಲಿ ಮೂಡಿಬರುವ ಕಿರುತೆರೆ ಬಿಗ್‌ಬಾಸ್‌ ಶೋ ಆರಂಭಕ್ಕೆ  ಕಾಯುತ್ತಿದ್ದರೆ,  ಮತ್ತೊಂದೆಡೆ ಅವರನ್ನು ದೊಡ್ಡ ಪರದೆ ಮೇಲೆ ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್ ಅವರ ನಟನೆಯ ಸಿನಿಮಾಗಾಗಿ ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿಯೊಂದು ಇದೆ.

ಈ ವಿಚಾರ ಸುದೀಪ್ ಅವರ ಹುಟ್ಟುಹಬ್ಬದ ದಿನ ರಿವೀಲ್ ಆಗಲಿದೆ ಎಂಬುದು ಸದ್ಯದ ವಿಷಯ. ಸೆಪ್ಟೆಂಬರ್ 2ರಂದು 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ. ಅದೇನೆಂದರೆ ಅವರ ನಟನೆಯ ಬಹುನಿರೀಕ್ಷಿತ 'ಮ್ಯಾಕ್ಸ್‌' ಸಿನಿಮಾ ರಿಲೀಸ್ ಡೇಟ್ ಅನ್ನು ಅಂದು ಅವರು ಅನೌನ್ಸ್ ಮಾಡಲಿದ್ದಾರೆ.

ಅದಲ್ಲದೆ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಕೂಡಾ ಅಕ್ಟೋಬರ್‌ ತಿಂಗಳಿನಲ್ಲಿ ಶುರುವಾಗಲಿದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈಗಾಗಲೇ ಸುದೀಪ್ ಅವರ ಪ್ರೋಮೋ ಶೂಟ್ ಆಗಿದ್ದು, ಕಿರುತೆರೆಯಲ್ಲಿ ಅವರ ಹೊಸ ಲುಕ್‌ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದಲ್ಲದೆ ದೊಡ್ಮನೆಗೆ ಎಂಟ್ರಿಯಾಗುವ ಅಭ್ಯರ್ಥಿಗಳ ಪಟ್ಟಿಯೂ ಭಾರೀ ಕುತೂಹಲ ಮೂಡಿಸುತ್ತಿದೆ.

ಒಟ್ಟಾರೆ ಸೆಪ್ಟೆಂಬರ್‌ನಿಂದ ಕಿಚ್ಚ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ ಜ್ಯೋತಿ ರೈ, ಇನ್ನೂ ಮಾಡ್ರನ್ ಡ್ರೆಸ್‌ಗೆ ಬೇಡಿಕೆಯಿಟ್ಟ ಪಡ್ಡೆ ಹುಡುಗರು