Select Your Language

Notifications

webdunia
webdunia
webdunia
webdunia

ದರ್ಶನ್ ಬಗ್ಗೆ ಹೇಳಿಕೆ ನೀಡಿ ರಿಲ್ಯಾಕ್ಸ್‌ ಆಗಿದ್ದ, ಚಿಕ್ಕಣ್ಣಗೆ ಶಾಕ್ ಕೊಟ್ಟ ಪೊಲೀಸ್‌

ದರ್ಶನ್ ಬಗ್ಗೆ ಹೇಳಿಕೆ ನೀಡಿ ರಿಲ್ಯಾಕ್ಸ್‌ ಆಗಿದ್ದ, ಚಿಕ್ಕಣ್ಣಗೆ ಶಾಕ್ ಕೊಟ್ಟ ಪೊಲೀಸ್‌

Sampriya

ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2024 (16:05 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಇಂದು ಬಿಗ್‌ ಅಪ್‌ಡೇಟ್ ನೀಡಿದ್ದಾರೆ.

ಇಂದು ಡಿಗ್ಯಾಂಗ್‌ನಿಂದ ಹತ್ಯೆಗೊಳಗಾದ ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾಗಿರುವ ನಟ ಚಿಕ್ಕಣ್ಣ ಅವರು ದರ್ಶನ್ ಭೇಟಿಯಾಗಿ ಮಾತನಾಡಿರುವುದರ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇದರಿಂದಾಗಿ ಇದೀಗ ಹಾಸ್ಯನಟ ಚಿಕ್ಕಣ್ಣಗೆ ಮತ್ತೇ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಇನ್ನೂ ರೇಣುಕಾಸ್ವಾಮಿ ಹತ್ಯೆ ನಡೆದ ನಂತರ ದರ್ಶನ್ ಅವರು ಚಿಕ್ಕಣ್ಣ ಜತೆ ಪಾರ್ಟಿ ಮಾಡಿರುವುದು
ತನಿಖೆ ವೇಳೆ ತಿಳಿದುಬಂದಿತ್ತು. ಈ ಸಂಬಂಧ ಪೊಲೀಸರು ಚಿಕ್ಕಣ್ಣಗೆ ನೋಟಿಸ್ ನೀಡಿತ್ತು. ಪ್ರಮುಖ ಸಾಕ್ಷಿಯಾಗಿರುವ ಕಾರಣ ಚಿಕ್ಕಣ್ಣ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿತ್ತು.

ಇದಾದ ಕೆಲವು ದಿನಗಳ ನಂತರ  ನಟ ಅಭಿಷೇಕ್ ಅಂಬರೀಶ್, ಧನ್ವೀರ್ ಅವರೊಂದಿಗೆ ಚಿಕ್ಕಣ್ಣ ಅವರು ನಟ ದರ್ಶನ್ ಅವರನ್ನು ಭೇಟಿಯಾಗಿದ್ದರು.  ತನಿಖೆ ಹಂತದಲ್ಲಿರುವುದಾಗ ಪ್ರಕರಣದ ಸಾಕ್ಷಿಯೂ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡುವುದಿಲ್ಲ. ಆದರೆ ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಚುರುಕುಗೊಂಡ ಬೆನ್ನಲ್ಲೇ ಚಿಕ್ಕಣ್ಣ ಭೇಟಿಯಾಗಿರುವುದು, ಅವರಿಗೆ ಹೊಸ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ಈ ಬಗ್ಗೆ ಪ್ರತಿತಿಕ್ರಿಯಿಸಿದ ಪೊಲೀಸ್ ಆಯುಕ್ತರು,  ಚಿಕ್ಕಣ್ಣ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಿರುವುದು  ತಿಳಿದುಬಂದಿದ್ದು, ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

2024ರ ಅತೀ ಹೆಚ್ಚು ಗಳಿಕೆ ಕಂಡ ನಟ ಧನುಷ್ ಅಭಿನಯದ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ