Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಆರ್ಥಿಕ ಸಂಕಷ್ಟ, ಹಿರಿಯ ಅಧಿಕಾರಿಗಳಿಗೆ ಪತ್ರದಲ್ಲಿ ಮನವಿ

Actor Darshan

Sampriya

ಬೆಂಗಳೂರು , ಸೋಮವಾರ, 19 ಆಗಸ್ಟ್ 2024 (19:05 IST)
Photo Courtesy X
ಬೆಂಗಳೂರು: ನಟ ದರ್ಶನ್‌ ಅವರು ಎ2 ಆರೋಪಿಯಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.

ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಪ್ರಕರಣವನ್ನು ತೀವ್ರ ತನಿಖೆ ಮಾಡಿದೆ. ಇನ್ನೂ ಸಾಕ್ಷ್ಯಕ್ಕಾಗಿ ತನಿಖಾ ತಂಡ  ಹತ್ತಾರು ಕಡೆ ಸುತ್ತಾಟ ನಡೆಸಿದೆ. ಪ್ರಕರಣ ಸಂಬಂಧ 200ಕ್ಕೂ ಅಧಿಕ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ನೂರಾಕ್ಕೂ ಅಧಿಕ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ.

ಇದೀಗ ತನಿಖೆ ನಡೆಸಲು ಓಡಾಡ ನಡೆಸಿದ ಪೊಲೀಸರು ತಮ್ಮ ಸ್ವಂತ ಹಣವನ್ನು ಹಾಕಿದ್ದು, ಬಿಲ್ ಸಂಗ್ರಹ ಮಾಡಿದ್ದಾರೆ. ಈಗ ಆ ಎಲ್ಲಾ ಬಿಲ್​ಗಳನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದು ಹಣವನ್ನು ಮಂಜೂರು ಮಾಡುವಂತೆ ಮನವಿ ಮಾಡಿರುವುದು ತಿಳಿದುಬಂದಿದೆ.

ಪ್ರಕರಣ ಸಂಬಂಧ ರೇಣುಕಾಸ್ವಾಮಿಯನ್ನು ಅಪಹರಿಸಿದ ಸ್ಥಳ, ಚಿತ್ರಹಿಂಸೆ ನೀಡಿ ಕೊಲೆ ನಡೆಸಿದ ಸ್ಥಳ, ಎ1 ಆರೋಪಿ ಪವಿತ್ರಾ ಗೌಡ ಮನೆ ಮಹಜರು, ಎ2 ಆರೋಪಿ ದರ್ಶನ್ ಮನೆ ಮಹಜರು ಸೇರಿದಂತೆ ಹಲವು ಕಡೆ ಮಹಜರು ಮಾಡಿದ್ದಾರೆ. ‌

ಪೊಲೀಸರು ತನಿಖೆಗಾಗಿ ಓಡಾಟ ನಡೆಸಿದಾಗ ದಿನನಿತ್ಯದ ಖರ್ಚನ್ನು ಸ್ವಂತ ಜೇಬಿನಿಂದಲೇ ಹಾಕಿದ್ದಾರೆ.   ಇದುವರೆಗೂ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಆ ಹಣವನ್ನು ತಮ್ಮ ಕೈಯಿಂದ ಅಧಿಕಾರಿಗಳು ಹಾಕಿದ್ದು ಈಗ ಅದನ್ನು ಮಂಜೂರು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಬಿಲ್ ಸಮೇತ ಮನವಿ ಮಾಡಿದ್ದಾರೆ.

ಸದ್ಯ ಈ ವಿಚಾರವನ್ನು ಪೊಲೀಸರು ರಿಮಾಂಡ್​​ನಲ್ಲಿ ಸಹ ಉಲ್ಲೇಖಿಸಿದ್ದಾರೆ. ಈ ಮೂಲಕ ಸತತ 60 ದಿನಗಳಿಗೂ ಅಧಿಕ ಅವಧಿಯಿಂದ ನಡೆಯುತ್ತಿರುವ ತನಿಖೆ ನಡುವೆ ಪೊಲೀಸರು ವೆಚ್ಚದ ಸಂಪೂರ್ಣ ಮಾಹಿತಿಯನ್ನು ಕೂಡಾ ಉಲ್ಲೇಖ ಮಾಡಿರುವುದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಖಿ ಕಟ್ಟಿಸಿಕೊಳ್ಳಲು ಕರೆದರು ಕ್ಯಾರೇ ಎನ್ನದ ಪವಿತ್ರಾ ಗೌಡ: ಜೈಲು ಸೇರಿದ್ರು ಇನ್ನೂ ಸೊಕ್ಕು ಇಳಿಯಲಿಲ್ಲ