Select Your Language

Notifications

webdunia
webdunia
webdunia
webdunia

ದರ್ಶನ್‌ ಭೇಟಿಯ ಬೆನ್ನಲ್ಲೇ ರೇಣುಕಾ ಸ್ವಾಮಿ ಮನೆಗೆ ತೆರಳಿ ಧೈರ್ಯ ತುಂಬಿದ ವಿನೋದ್‌ರಾಜ್‌

Vinodraj

Sampriya

ಬೆಂಗಳೂರು , ಶುಕ್ರವಾರ, 26 ಜುಲೈ 2024 (14:22 IST)
Photo Courtesy X
ಬೆಂಗಳೂರು: ಕೆಲ ದಿನದ ಹಿಂದೆಯಷ್ಟೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ  ದರ್ಶನ್  ಅವರ ಭೇಟಿಯಾಗಿದ್ದ ನಟ ವಿನೋದ್ ರಾಜ್ ಇಂದು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜೊತೆಗೆ ₹1 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಜುಲೈ 23 ರಂದು ನಟ ವಿನೋದ್ ರಾಜ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಮಾತನಾಡಿಸಿದ್ದರು. ಅದರ ಬೆನ್ನಲ್ಲೇ ಚಿತ್ರದುರ್ಗಕ್ಕೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಹೀಗೆ ಆಗಿರುವುದು ಆಘಾತಕಾರಿ ವಿಷಯ. ಹೆಸರು, ಕೀರ್ತಿಯಲ್ಲಿರುವ ನಾವು ಎಚ್ಚರವಾಗಿರಬೇಕು, ನಮ್ಮ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ‌ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು ಎಂದು ವಿನೋದ್ ರಾಜ್​ಕುಮಾರ್ ಹೇಳಿದರು.

ದರ್ಶನ್ ಭೇಟಿ ವೇಳೆ ರೇಣುಕಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿನೋದ್ ರಾಜ್, ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾದಾಗ ಅವರು ರೇಣುಕಾ ಸ್ವಾಮಿ ಕುಟುಂಬದ ಬಗ್ಗೆ ಮಾತನಾಡಲಿಲ್ಲ, ಸಿಕ್ಕ ಸಮಯಾವಕಾಶದಲ್ಲಿ ಹೆಚ್ಚು ಮಾತನಾಡಲು ಆಗಲಿಲ್ಲ, ನನ್ನನ್ನು ನೋಡಿದಾಕ್ಷಣ‌ ದರ್ಶನ್ ಭಾವುಕರಾದರು, ದರ್ಶನ್ ನನ್ನನ್ನು ತಬ್ಬಿಕೊಂಡರು ಅಷ್ಟೆ, ಇಂತಹ ಘಟನೆ ನಡೆಯಬಾರದಿತ್ತು, ಮನುಷ್ಯ, ಕ್ರೋಧ, ದ್ವೇಷ, ಅಸೂಯೆ ಎಲ್ಲ ಬಿಡಬೇಕು, ಎಲ್ಲದಕ್ಕೂ ಕಡಿವಾಣ ಹಾಕಬೇಕು ಎಂದರು.

ನಮ್ಮ ತಾಯಿಯವರ ಸಿನೆಮಾ ನೋಡಿದ್ದೇವೆ ಎಂದು ರೇಣುಕಾಸ್ವಾಮಿ ತಂದೆ ಹೇಳಿದರು. ಅದನ್ನು ಕೇಳಿ ಇನ್ನಷ್ಟು ಬೇಸರವಾಯ್ತು ಎಂದು ವಿನೋದ್ ರಾಜ್ ಭಾವುಕರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಮಾಡಿಸಿ ಸಂಬಳ ಕೊಡದೇ ಅವಮಾನಿಸಿದರು: ಹಂಸಲೇಖ ಬಗ್ಗೆ ಗಾಯಕ ಶಂಕರ್ ಶಾನುಭೋಗ್ ಹೇಳಿದ ಶಾಕಿಂಗ್ ವಿಚಾರಗಳು