Select Your Language

Notifications

webdunia
webdunia
webdunia
Saturday, 5 April 2025
webdunia

ಅಭಿಮಾನಿಗೆ ವಿಐಪಿ ಸೆಲ್‌ನಲ್ಲಿ ದೇವರಂತೆ ಕಂಡ ದರ್ಶನ್

Actor Darshan Arrest

Sampriya

ಬೆಂಗಳೂರು , ಬುಧವಾರ, 24 ಜುಲೈ 2024 (19:41 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ವರು ವಿಐ‍ಪಿ ಸೆಲ್‌ನಲ್ಲಿ ನರಕ ಅನುಭವಿಸುತ್ತಿದ್ದಾರೆ ಎಂದು ಅವರ ಅಭಿಮಾನಿ ತುರುವನೂರು ಸಿದ್ಧಾರೂಢ ಅವರು ಹೇಳಿದ್ದಾರೆ.

ಸನ್ನಢತೆ ಆಧಾರದಲ್ಲಿ ಜೈಲಿನಿಂದ ಹೊರಬಂದಿರುವ ಕೈದಿಯಾಗಿದ್ದ ಸಿದ್ಧಾರೂಡ ಅವರು ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೊಂಡಿದ್ದಾರೆ. ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ನನಗೆ ಸನ್ನಢತೆ ಆಧಾರದಲ್ಲಿ ಬಿಡುಗಡೆ ಅವಕಾಶ ಹಿನ್ನೆಲೆ ಜೈಲಾಧಿಕಾರಿಗಳಲ್ಲಿ ದರ್ಶನ್ ಭೇಟಿಗೆ ಬೇಡಿಕೆಯಿಟ್ಟೆ. ಅವರು ನನಗೆ ದರ್ಶನ್‌ ಭೇಟಿಗೆ ಅವಕಾಶ ಮಾಡಿಕೊಟ್ಟರು ಎಂದರು.

ನಾನು ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಿ ಕೆಲಹೊತ್ತು ಅವರ ಜತೆ ಮಾತುಕತೆ ನಡೆಸಿದೆ. ಈ ವೇಳೆ ದರ್ಶನ್ ಅವರು ಕುಗ್ಗಿ ಹೋಗಿದ್ದರು. ನನ್ನನ್ನು ತಬ್ಬಿಕೊಂಡು ನನ್ನ ಹಿನ್ನೆಲೆ ಕೇಳಿದರು. ಈ ವೇಳೆ ದರ್ಶನ್ ನನಗೆ ಬಿಸ್ಕೆಟ್ ಕೊಟ್ರು. ಅವರನ್ನು ಜೈಲಿನಲ್ಲಿ ನೋಡಲು ತುಂಬಾನೇ ನೋವಾಯಿತು ಎಂದರು.

ಇನ್ನೂ ವಿಐಪಿ ಸೆಲ್‌ನಲ್ಲಿರುವ ದರ್ಶನ್ ಅವರಿಗೆ ಒಂಟಿತನ ಕಾಡುತ್ತಿದೆ. ಅವರು ಮಾತಿಗೆ ಯಾರಾದ್ರೂ ಸಿಗಲಿ ಎಂದು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ ಬಿಗ್‌ ಆಫರ್ ಕೈಬಿಟ್ಟ ಡಾಲಿ ಧನಂಜಯ್, ಕಾರಣ ಏನು ಗೊತ್ತಾ