Select Your Language

Notifications

webdunia
webdunia
webdunia
Sunday, 6 April 2025
webdunia

ದರ್ಶನ್ ಬಿಡುಗಡೆ ಬಗ್ಗೆ 'ಕೌಡೇಪಿರ ಲಾಲಸಾಬ ದೇವರು' ನುಡಿದ ಭವಿಷ್ಯದಲ್ಲೇನಿದೆ

Actor Darshan Arrest

Sampriya

ಬೆಂಗಳೂರು , ಗುರುವಾರ, 25 ಜುಲೈ 2024 (18:28 IST)
ಬೆಂಗಳೂರು: ಕೊಲೆ ಪ್ರಕರಣದಡಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ  ನಟ ದರ್ಶನ್ ಅವರು ಜೈಲಿನಿಂದ ಆದಷ್ಟು ಬೇಗ ಬಿಡುಗಡೆಯಾಗಲಿ ಎಂದು ಅವರು ಅಭಿಮಾನಿಗಳು ಕಾಯುತ್ತಿದ್ದಾರೆ.

ಇತ್ತ ಪತಿಯನ್ನು ಈ ಪ್ರಕರಣದಿಂದ ಹೊರತರಲು ಪತ್ನಿ ವಿಜಯಲಕ್ಷ್ಮೀ ಅವರು ಕಾನೂನಿನ ಹೋರಾಟ ಮಾಡುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಅವರಿಗೆ ಈ ಪ್ರಕರಣದಿಂದ ಬೇಗ ಹೊರಬರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಇದೀಗ ದರ್ಶನ್ ಅವರು ಯಾವಾಗ ಜೈಲಿಂದ ಬಿಡುಗಡೆಯಾಗುತ್ತಾರೆಂಬ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿದೆ.  ಕೊಪ್ಪಳದ ಜನರು ತುಂಬಾನೇ ನಂಬುವ ದೇವರು ದರ್ಶನ್ ಅವರು ಜೈಲಿಂದ ಬಿಡುಗಡೆಯಾಗುವ ಬಗ್ಗೆ ಅವರ ಅಭಿಮಾನಿಗಳಿಗೆ ಅಭಯ ನೀಡಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ 10ನೇ ವಾರ್ಡಿನಲ್ಲಿ ಇರಿಸಲಾಗಿದ್ದ ಕೌಡೇಪಿರ ಲಾಲಸಾಬ ದೇವರು ಬಳಿ  ದರ್ಶನ್ ಅಭಿಮಾನಿಗಳು ನಟ ದರ್ಶನ್‌ ಬಿಡುಗಡೆಗೆ ಬಗ್ಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಕೌಡೇಪಿರ ಲಾಲಾಸಾಬ ದೇವರು ಮೂರು ತಿಂಗಳಲ್ಲಿ ದರ್ಶನ್ ಅವರು ಜೈಲಿಂದ ಬಿಡುಗಡೆಯಾಗುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯದಿಂದ ದರ್ಶನ್ ಅಭಿಮಾನಿಗಳು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.  


Share this Story:

Follow Webdunia kannada

ಮುಂದಿನ ಸುದ್ದಿ

ಬುಕ್ಸ್‌ ಓದುತ್ತಿರುವ ದರ್ಶನ್ ನೋಡಿ ಸಮಾಧಾನ ಆಯಿತು: ಸಾಧುಕೋಕಿಲ