Select Your Language

Notifications

webdunia
webdunia
webdunia
Saturday, 12 April 2025
webdunia

ಬುಕ್ಸ್‌ ಓದುತ್ತಿರುವ ದರ್ಶನ್ ನೋಡಿ ಸಮಾಧಾನ ಆಯಿತು: ಸಾಧುಕೋಕಿಲ

Music Director Sadhukokila Jail Visit

Sampriya

, ಗುರುವಾರ, 25 ಜುಲೈ 2024 (16:48 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಸಂಗೀತ ನಿರ್ದೇಶಕ ಸಾಧುಕೋಕಿಲ ಅವರು ಇಂದು ಭೇಟಿಯಾಗಿದ್ದಾರೆ. ಈಚೆಗೆ ದರ್ಶನ್ ಅವರನ್ನು ಭೇಟಿಯಾಗಲು ಚಿತ್ರರಂಗದ ಗಣ್ಯರು ಪರಪ್ಪನ ಅಗ್ರಹಾರಕ್ಕೆ ಆಗಮಿಸುತ್ತಿದ್ದಾರೆ. ಈಚೆಗೆ ನಟ ವಿನೋದ್ ರಾಜ್, ತರುಣ್ ಸುಧೀರ್, ಯಶಸ್ ಸೂರ್ಯ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಇದೀಗ ಸಾಧುಕೋಕಿಲ ಅವರು ದರ್ಶನ್ ಅವರನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಕೂಡಾ ಇದ್ದರು.

ಭೇಟಿ ನಂತರ ಮಾತನಾಡಿದ ಸಾಧುಕೋಕಿಲ ಅವರು, ಕಳೆದ ಮಂಗಳವಾರ ದರ್ಶನ್ ಭೇಟಿಗೆ ಬಂದಿದ್ದೆ, ಆಗಿರಲಿಲ್ಲ. ಮೆಜೆಸ್ಟಿಕ್ ಸಿನಿಮಾ ನಿರ್ಮಾಪಕ ರಾಮಮೂರ್ತಿ ಸೇರಿದಂತೆ ನಮ್ಮ ಸ್ನೇಹಿತರ ಬಳಗ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದೇವೆ.

ದರ್ಶನ್ ಅವರು ಜೈಲಿನಲ್ಲಿ ಬುಕ್ಸ್ ಓದಿಕೊಂಡು ಆರಾಮಾಗಿ ಇದ್ದಾರೆ. ಅವರನ್ನು ನೋಡಿ ಇದೀಗ ನೆಮ್ಮದಿ ಸಿಕ್ತು. ನಾವು ಅವರ ಮೊದಲನೇ ಸಿನಿಮಾ ಮೆಜೆಸ್ಟಿಕ್​ನಿಂದ ಸ್ನೇಹಿತರು. ನಟ ದರ್ಶನ್ ಏನೂ ಅಂತಾ ಚೆನ್ನಾಗಿ ಗೊತ್ತು. ಒಬ್ಬ ಬ್ರದರ್ ಆಗಿ ನಟ ದರ್ಶನ್ ನೋಡ್ಲಿಕ್ಕೆ ಬಂದಿದ್ದೇನೆ ಎಂದು ಹೇಳಿದರು.

ದರ್ಶನ್ ಆರೋಗ್ಯವಾಗಿದ್ದು, ಕಾನೂನು ರೀತಿಯಲ್ಲಿ ನಟ ದರ್ಶನ್​ಗೆ ಚಿಕಿತ್ಸೆ ಮತ್ತು ಇತರೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಸಾಧುಕೋಕಿಲ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ನಟನೆಯ 'ಟಾಕ್ಸಿಕ್‌'ಗೆ ಸಿನಿಮಾಗೆ ಕಾನೂನು ಸಂಕಷ್ಟ