Select Your Language

Notifications

webdunia
webdunia
webdunia
Friday, 11 April 2025
webdunia

ದರ್ಶನ್‌ ಫ್ಯಾನ್ಸ್‌ ಈ ಕೆಲ್ಸ ಮಾಡ್ತಾ ಇದ್ದಾರೆ: ದಿವ್ಯಾ ವಸಂತ ತಾಯಿ ಕಣ್ಣೀರು

Divya Vasantha Arrest

Sampriya

ಬೆಂಗಳೂರು , ಭಾನುವಾರ, 21 ಜುಲೈ 2024 (16:39 IST)
Photo Courtesy X
ಬೆಂಗಳೂರು: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದ ಬಂಧಿಯಾಗಿರುವ ನಿರೂಪಕಿ, ನಟಿ ದಿವ್ಯಾ ವಸಂತ್ ತಾಯಿ ವಿಡಿಯೋ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

ದಿವ್ಯಾ ವಸಂತ್ ಸುಲಿಗೆ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೇ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ವಿಡಿಯೋಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಅದಲ್ಲದೆ ಆಕೆಯ ವಿರುದ್ಧ ಆನೇಕ ಆರೋಪಗಳನ್ನು ಮಾಡಿ ಪ್ರಶ್ನಿಸುತ್ತಿದ್ದಾರೆ. ಇದರಿಂದ ಮನನೊಂದ ದಿವ್ಯಾ ಅವರ ತಾಯಿ ವಸಂತ ವಿಡಿಯೋ ಮಾಡಿ ದರ್ಶನ್‌ ಅಭಿಮಾನಿಗಳು ಹಾಗೂ ಟ್ರೋಲ್‌, ಕಮೆಂಟ್‌ ಮಾಡುವವರಿಗೆ ಮನವಿ ಮಾಡಿಕೊಂಡಿದ್ದಾರೆ.

ಕಣ್ಣೀರು ಹಾಕುತ್ತಲೇ ವಿಡಿಯೋ ಮಾಡಿರುವ ದಿವ್ಯಾ ವಸಂತ ತಾಯಿ 'ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಮಾತನಾಡಿರುವವರೆಲ್ಲಾ ದರ್ಶನ್‌ ಫ್ಯಾನ್ಸ್‌ಗಳೇ ಅಂತಾ ನನಗೆ ಗೊತ್ತು. ಅವಳು ತಪ್ಪು ಮಾಡಿದ್ದಾಳೋ ಇಲ್ಲವೋ ಎಂದು ದಿವ್ಯಾ ಬಂದ ಮೇಲೆ ಗೊತ್ತಾಗುತ್ತದೆ. ಅವಳ ಕೆಲಸ ಅವಳು ಮಾಡಿದ್ದಾಳೆ.

ದರ್ಶನ್ ಅವರು ಎಲ್ಲರಿಗೂ ಬೇಕಾಗಿರುವವರೇ. ನಮಗೂ ದರ್ಶನ್ ಅಂದ್ರೆ ಇಷ್ಟ, ನಮ್ಮ ಮಕ್ಕಳಿಗೂ ಇಷ್ಟ. ನನ್ನ ಮಗನಿಗೂ ಇಷ್ಟ. ಆಕೆಗೆ ಏನು ಕೆಲಸ ಕೊಟ್ಟಿದ್ದಾರೆ. ಅದನ್ನು ಮಾತ್ರ ದಿವ್ಯಾ ಮಾಡಿದ್ದಾಳೆ. ಅವರ ಬಗ್ಗೆ ಮಾತನಾಡಿರುವ ಕುರಿತು ಅವಳೇ ಬಂದು ಅದಕ್ಕೆ ಉತ್ತರ ಕೊಡುತ್ತಾಳೆ. ಅದುವರೆಗೂ ಕೆಟ್ಟದಾಗಿ ಏನೂ ವೈರಲ್ ಮಾಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯನೇ ಜಗಳ ಶುರು ಮಾಡುದ್ವಂತೆ: ದಾಂಪತ್ಯದ ಬಗ್ಗೆ ಅಭಿಷೇಕ್ ಅಚ್ಚರಿ ಹೇಳಿಕೆ