Select Your Language

Notifications

webdunia
webdunia
webdunia
webdunia

ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

Sampriya

ಬೆಂಗಳೂರು , ಶನಿವಾರ, 20 ಜುಲೈ 2024 (17:23 IST)
Photo Courtesy X
ಬೆಂಗಳೂರು : ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಅವರು ಇಂದು ಆತ್ಮಹತ್ಯೆ ಶರಣಾಗಿದ್ದಾರೆ.  ಬೆಂಗಳೂರಿನ ನಾಗರಬಾವಿಯಲ್ಲಿ  ತಮ್ಮ ನಿವಾಸದಲ್ಲಿ ವಿನೋದ್ ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಇನ್ನೂ ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ವಿನೋಧ್ ಅವರು ನಿನಾಸಂ ಸತೀಶ್ ನಟನೆಯ 'ಅಶೋಕ ಬ್ಲೇಡ್' ಚಿತ್ರ ನಿರ್ದೇಶನ ಮಾಡಲಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಶುರುವಾಗಬೇಕಿತ್ತು.

ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇವರು ಕರಿಮಣಿ,‌ ಶಾಂತಂ ಪಾಪಂ ಸೇರಿದಂತೆ ಅನೇಕ ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದಾರೆ.  ಮೂಲಗಳ ಮಾಹಿತಿ ಪ್ರಕಾರ ವಿನೋಧ್ ಅವರು ನಿರ್ಮಾಪಕರಾದ ಬಳಕ ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಇವರು ಜೀವನ ಅಂತ್ಯ ಮಾಡಿಕೊಂಡರು ಎಂಬ ಮಾಹಿತಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆ 3 ಸೆಕೆಂಡ್‌ನ ವಿಡಿಯೋ ಸಿಕ್ಕರೆ ದರ್ಶನ್‌ ಮುಂದಿನ ಕತೆಯೇನು