Select Your Language

Notifications

webdunia
webdunia
webdunia
webdunia

ರಾಖಿ ಕಟ್ಟಿಸಿಕೊಳ್ಳಲು ಕರೆದರು ಕ್ಯಾರೇ ಎನ್ನದ ಪವಿತ್ರಾ ಗೌಡ: ಜೈಲು ಸೇರಿದ್ರು ಇನ್ನೂ ಸೊಕ್ಕು ಇಳಿಯಲಿಲ್ಲ

Raksha Bandhan Celebration
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿಯಾಗಿ ಜೈಲು ಸೇರಿರುವ ಪವಿತ್ರಾ ಗೌಡ ಅವರು ಮತ್ತೇ ಧಿಮಾಕು ತೋರಿಸಿದ್ದಾರೆಂದು ತಿಳಿದುಬಂದಿದೆ. ಇಂದು ರಕ್ಷಾ ಬಂಧನದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿಗೆ ಮಹಿಳೆಯರು ರಾಖಿ ಕಟ್ಟಲು ಹೋಗಿದ್ದಾರೆ.

ಈ ವೇಳೆ ಜೈಲಿನಲ್ಲಿದ್ದ ಮಹಿಳಾ ಆರೋಪಿಗಳು ರಾಖಿ ಕಟ್ಟಿಸಿಕೊಂಡು, ಸಿಹಿ ತಿನಿಸು ಸ್ವೀಕರಿಸಿದ್ದಾರೆ. ಆದರೆ ಪವಿತ್ರಾ ಗೌಡ ಮಾತ್ರ ತನ್ನ ಕೋಣೆಯಿಂದ  ಹೊರಬಂದಿಲ್ಲ. ಕರೆದರು ಡೋಂಟ್ ಕೇರ್ ಮಾಡಿದ್ದಾಳೆ. ಈ ಬಗ್ಗೆ ಅಲ್ಲಿಗೆ ಹೋಗಿದ್ದ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಹಿಳೆ, ನಾವು ರಕ್ಷಾ ಬಂಧನದ ಹಿನ್ನೆಲೆ ಜೈಲಿನಲ್ಲಿರುವ ಮಹಿಳೆಯರಿಗೆ ರಾಖಿ ಕಟ್ಟಿ ಸಿಹಿ ಮತ್ತು ಟವಲ್ ಅನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಕೋಣೆಯಲ್ಲಿದ್ದ ಎಲ್ಲರೂ ಬಂದು ರಾಖಿ ಕಟ್ಟಿಸಿಕೊಂಡರು. ಆದರೆ ಪವಿತ್ರಾ ಮಾತ್ರ ಹೊರಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೂ ದರ್ಶನ್ ಜೈಲು ಸೇರಿದ ಬಳಿಕ ಪ್ರತಿ ಸೋಮವಾರ ಪರಪ್ಪನ ಅಗ್ರಹಾರಕ್ಕೆ ಹೋಗಿ ಪತಿಯನ್ನು ಭೇಟಿಯಾಗುವ ವಿಜಯಲಕ್ಷ್ಮೀ ಇಂದು ಹೋಗಿದ್ದಾರೆ. ಈ ವೇಳೆ ಅಲ್ಲಿಗೆ ರಾಖಿ ಕಟ್ಟಲು ಬಂದಿದ್ದ ಮಹಿಳೆಯರು ವಿಜಯಲಕ್ಷ್ಮೀ ಹಾಗೂ ವಿನೀಶ್‌ಗೆ ರಾಖಿ ಕಟ್ಟಿದ್ದಾರೆ. ವಿಜಯಲಕ್ಷ್ಮೀ ಅವರು ನಮ್ಮನ್ನು ತುಂಬಾ ವಿನಮ್ರತೆಯಿಂದ ನಡೆಸಿಕೊಂಡಿದ್ದಾರೆ. ನಮ್ಮಿಂದ ಸಿಹಿ ಪಡೆದರು. ಅವರ ಜತೆ ಮಾತನಾಡಿದ್ದು ತುಂಬಾನೇ ಖುಷಿ ಆಯಿತು ಎಂದು ಮಹಿಳೆಯರು ಹೇಳಿದ್ದಾರೆ.

ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲು ಸೇರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಭೀಮ' ಸಿನಿಮಾದ ಖಡಕ್ ಇನ್ಸ್‌ಸ್ಪೆಕ್ಟರ್‌ 'ಗಿರಿಜಾ'ಗೆ ಕಣ್ಣೀರು ಹಾಕಿಸಿದ 'ಲಕ್ಷಣ' ಸೀರಿಯಲ್ ಗೆಳತಿಯರು