Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ದರ್ಶನ್‌ಗೆ ಫವರ್‌ಫುಲ್ ದೇವಿಯ ಪ್ರಸಾದ ತಂದ ವಿಜಯಲಕ್ಷ್ಮೀ

Renukaswamy Crime Case

Sampriya

ಬೆಂಗಳೂರು , ಸೋಮವಾರ, 5 ಆಗಸ್ಟ್ 2024 (15:39 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ್ ಅವರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.

ನಿನ್ನೆ ಭೀಮನ ಅಮವಾಸ್ಯೆ ನಿಮಿತ್ತ ದರ್ಶನ್ ಅವರು ಈ ಪ್ರಕರಣದಿಂದ ಹೊರಬರಲೆಂದು ಬನಶಂಕರಿ ದೇವಸ್ಥಾನದಲ್ಲಿ ಸಂಕಲ್ಪ ಪೂಜೆ ಮಾಡಿಸಿದ್ದರು.  ಇದೀಗ ದರ್ಶನ್ ಅವರಿಗೆ ಬನಶಂಕರಿ ಅಮ್ಮನ ಪ್ರಸಾದವನ್ನು ವಿಜಯಲಕ್ಷ್ಮೀ ನೀಡಿದ್ದಾರೆ.

ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಅವರನ್ನು ಹೊರತರಲು ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟದ ಜತೆ ದೇವರ ಮೊರೆ ಹೋಗುತ್ತಿದ್ದಾರೆ.  ಅಂದಹಾಗೆ, ಕಳೆದ ವಾರ ದರ್ಶನ್ ಸಂಕಷ್ಟವೆಲ್ಲಾ ನಿವಾರಣೆ ಆಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕೆ ತಾಯಿಗೆ ಚಂಡಿಕಾ ಯಾಗ ಮಾಡಿಸಿದ್ದರು.

ಅದಲ್ಲದೆ ಸಹೋದರ ದಿನಕರ್ ತೂಗುದೀಪ್ ಅವರು ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿ, ದರ್ಶನ್ ಅವರನ್ನು ಈ ಪ್ರಕರಣದಿಂದ ಪಾರು ಮಾಡುವಂತೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

Wayanad: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟ ದುಡ್ಡು ಯಾರಿಗೆ ಸೇರುತ್ತೋ ಎಂದ ಬಿಗ್ ಬಾಸ್ ಸ್ಪರ್ಧಿ ಅಖಿಲ್ ಮಾರಾರ್ ವಿರುದ್ಧ ಕೇಸ್