Select Your Language

Notifications

webdunia
webdunia
webdunia
webdunia

ರಾಖಿ ಕಟ್ಟಿದ ಮೇಲೆ ಪ್ರಧಾನಿ ಮೋದಿ ತಲೆ ಮೇಲೆ ಕೈ ಇಟ್ಟ ಬಾಲಕಿ

Raksha Bandhan

Sampriya

ನವದೆಹಲಿ , ಸೋಮವಾರ, 19 ಆಗಸ್ಟ್ 2024 (18:01 IST)
Photo Courtesy X
ನವದೆಹಲಿ: ಇಂದು ದೇಶದಾದ್ಯಂತ ಅಣ್ಣ ತಂಗಿಯರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನವನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪುಟ್ಟ ಕೈಗಳಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ.

ದೆಹಲಿಯ ಶಾಲಾ ಬಾಲಕಿಯರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ವೇಳೆ ಮೋದಿ ಅವರು ಬಾಲಕಿಯರ ಜತೆ ಮಾತನಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಇದರಲ್ಲಿ ಒಬ್ಬಳು ಬಾಲಕಿ ರಾಖಿ ಕಟ್ಟಿದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಮೇಲೆ ಕೈಯಿಟ್ಟಿದ್ದಾಳೆ. ಅವಳನ್ನು ನೋಡುತ್ತಾ ಪ್ರಧಾನಿ ನಗು ಬೀರಿದ್ದಾರೆ.

ಇಂದು ಮುಂಜಾನೆ, ಪ್ರಧಾನಿ ಮೋದಿ ಅವರು ಸಹೋದರ ಸಹೋದರಿಯರ ನಡುವಿನ ಆಳವಾದ ಪ್ರೀತಿ ಮತ್ತು ಸಂಪರ್ಕವನ್ನು ಆಚರಿಸುವ ಈ ವಿಶೇಷ ದಿನದಂದು ಇಡೀ ರಾಷ್ಟ್ರಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

"ಸಹೋದರ ಸಹೋದರಿಯರ ನಡುವಿನ ಅಪಾರ ಪ್ರೀತಿಯನ್ನು ಸಂಕೇತಿಸುವ ಹಬ್ಬವಾದ ರಕ್ಷಾ ಬಂಧನದ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಈ ಪವಿತ್ರ ಹಬ್ಬವು ನಿಮ್ಮೆಲ್ಲರ ಬಾಂಧವ್ಯದಲ್ಲಿ ಹೊಸ ಮಾಧುರ್ಯವನ್ನು ತರಲಿ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದು ಪೋಸ್ಟ್‌ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ.29ರವರೆಗೆ ಸಿಎಂ ಸಿದ್ದರಾಮಯ್ಯ ಸೇಫ್: ಅರ್ಜಿ ವಿಚಾರಣೆ ಆ.29ಕ್ಕೆ ಮುಂದೂಡಿಕೆ