ಬೆಂಗಳೂರು: ರಕ್ಷಾ ಬಂಧನದ ಶುಭ ದಿನದಂದು ನಟಿ ಸೋನಾಲ್ ಮಂಥೆರೋ ಅವರು ನಟ ದರ್ಶನ್ ಅವರಿಗೆ ಶುಭಕೋರಿದ್ದಾರೆ.
ದರ್ಶನ್ ಅವರ ಬರ್ತಡೇ ದಿನ ತೆಗೆಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ ಸೋನಾಲ್ ಅವರು, ಈ ವಿಶೇಷ ದಿನದಂದು ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಂದೆಗೂ ಮರೆಯಾಗುವುದಿಲ್ಲ. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಐ ಲವ್ ಯೂ ಅಣ್ಣ ಎಂದು ಬರೆದುಕೊಂಡಿದ್ದಾರೆ.
ದರ್ಶನ್ ಹಾಗೂ ಸೋನಾಲ್ ಅವರು ಅಣ್ಣ- ತಂಗಿಯರ ಹಾಗೇ ಬಾಂಧವ್ಯವನ್ನು ಹೊಂದಿರುವುದಾಗಿ ಈ ಹಿಂದೆಯೂ ಹೇಳಿಕೊಂಡಿದ್ದಾರೆ. ಅದಲ್ಲದೆ ತರುಣ್ ಅವರನ್ನು ಸೋನಾಲ್ ಕೈ ಹಿಡಿಯಲು ಮುಖ್ಯ ಕಾರಣನೇ ದರ್ಶನ್ ಎಂದು ಅವರು ಹೇಳಿಕೊಂಡಿದ್ದಾರೆ.
ದರ್ಶನ್ ಅವರು ನಮ್ಮ ಬಾಳಿನಲ್ಲಿ ತುಂಬಾನೇ ಮುಖ್ಯವಾದವರು. ಎಲ್ಲಿದ್ದರೂ ನಮಗೆ ಅವರ ಆಶೀರ್ವಾದವಿದೆ ಎಂದು ಮದುವೆ ದಿನ ತರುಣ್ ಮತ್ತು ಸೋನಾಲ್ ಹೇಳಿಕೊಂಡಿದ್ದರು.