ಬೆಂಗಳೂರು: ಕಳೆದ ವಾರ ತೆರೆಕಂಡ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಭೀಮ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಎಲ್ಲ ಚಿತ್ರಮಂದಿರಗಳಲ್ಳೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಇದೇ ಖುಷಿಯಲ್ಲಿ ನಟ ವಿಜಯ್ ಅವರು ತಮ್ಮೂರಿಗೆ ತೆರಳಿ ತಂದೆ ತಾಯಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭೇಟಿಯ ವಿಡಿಯೋವನ್ನು ವಿಜಯ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 
									
			
			 
 			
 
 			
					
			        							
								
																	ತಂದೆ ತಾಯಿಯನ್ನು ತುಂಬಾನೇ ಪ್ರೀತಿಸುತ್ತಿದ್ದ ವಿಜಯ್ ಅವರು ಪೋಷಕರ ಕೆಲಸಗಳನ್ನು ಮಾಡುತ್ತಾ ಖುಷಿ ಪಡುತ್ತಿದ್ದರು. ತಂದೆ ತಾಯಿ ಅಗಲಿದ ಬಳಿಕ ವಿಜಯ್ ಅವರು ತಮ್ಮೂರಿನಲ್ಲಿ ಅವರಿಗೆ ಸಮಾಧಿ ಕಟ್ಟಿದ್ದಾರೆ. ಇನ್ನೂ ವಿಶೇಷ ಏನೆಂದರೆ ಈಚೆಗೆ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಅಲ್ಲೇ ಆಚರಿಸಿಕೊಂಡರು. 
									
										
								
																	ಸದ್ಯ ಭೀಮಗೆ ಪ್ರೇಕ್ಷಕರು ಫಿದಾ ಆಗಿದ್ದು, ಇದೇ ಖುಷಿಯಲ್ಲಿ ನಟ ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಭೀಮ ಸಿನಿಮಾ ಆಗಸ್ಟ್ 9ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿತ್ತು. ವಿಜಯ್ ಅವರು ನಟಿಸಿ, ಅಭಿನಯಿಸಿರುವ ಸಿನಿಮಾ ಇದಾಗಿದ್ದು, ಟ್ರೇಲರ್ ಮೂಲಕವೇ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಮೂಲ ಮಾಹಿತಿ ಪ್ರಕಾರ ಅಂದಿನಿಂದ ಇಂದಿನವರೆಗೂ ಒಟ್ಟು 19.73 ಕೋಟಿ ಕಲೆಕ್ಷನ್ ಮಾಡಿದೆ. 10 ನೇ ದಿನದಲ್ಲಿ 21 ಕೋಟಿ ಕಲೆಕ್ಷನ್‌ನೊಂದಿಗೆ ಇನ್ನೂ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
									
											
							                     
							
							
			        							
								
																	ಇನ್ನೂ ಈ ಸಿನಿಮಾ ವಿಜಯ್ ಅವರಿಗೆ ತುಂಬಾನೇ ವಿಶೇಷವಾಗಿದ್ದು, ಸಿನಿಮಾ ಸಂಬಂಧಿ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಈ ಸಿನಿಮಾದ ಮೂಲಕ ಮತ್ತೇ ದುನಿಯಾ ವಿಜಯ್ ಅವರು ಅಬ್ಬರಿಸುತ್ತಿದ್ದಾರೆ.