Select Your Language

Notifications

webdunia
webdunia
webdunia
webdunia

ಮದುವೆ ಬಳಿಕ ತರುಣ್ ಸುಧೀರ್, ಸೋನಲ್ ಮೊದಲ ಫೋಟೋ ವೈರಲ್

Tharun Sonal

Krishnaveni K

ಬೆಂಗಳೂರು , ಸೋಮವಾರ, 19 ಆಗಸ್ಟ್ 2024 (11:06 IST)
Photo Credit: Instagram
ಬೆಂಗಳೂರು: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ದಂಪತಿಯ ಮೊದಲ ಫೋಟೋ ಈಗ ವೈರಲ್ ಆಗಿದೆ.

ಮದುವೆ ಬಳಿಕ ತರುಣ್ ಮತ್ತು ಸೋನಲ್ ಎಲ್ಲೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಆದರೆ ಮೊನ್ನೆ ವರಮಹಾಲಕ್ಷ್ಮಿ ಹಬ್ಬ ನಿಮಿತ್ತ ಸೋನಲ್ ದೇವಿಗೆ ಪೂಜೆ ಮಾಡುತ್ತಿರುವ ಫೋಟೋವೊಂದನ್ನು ಪ್ರಕಟಿಸಿ ಹಬ್ಬಕ್ಕೆ ಶುಭ ಕೋರಿದ್ದರು. ಆದರೆ ಇದೀಗ ಮೊದಲ ಬಾರಿಗೆ ಜೋಡಿ ಜೀವದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನವದಂಪತಿ ತಮ್ಮ ಆಪ್ತ ಸ್ನೇಹಿತನ ಮನೆಯಲ್ಲಿ ಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ತೆಗೆಸಿಕೊಂಡ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮೊದಲ ಬಾರಿಗೆ ತರುಣ್-ಸೋನಲ್ ಮದುವೆ ಬಳಿಕ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋದಲ್ಲಿ ಸೋನಲ್ ಹಣೆ ತುಂಬಾ ಕುಂಕುಮವಿಟ್ಟು, ಸೀರೆಯುಟ್ಟು ಪಕ್ಕಾ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ತರುಣ್ ಕೂಡಾ ಸಾಂಪ್ರದಾಯಿಕ ಉಡುಗೆಯಲ್ಲೇ ಪತ್ನಿ ಜೊತೆ ಪೋಸ್ ಕೊಟ್ಟಿದ್ದಾರೆ. ಸೋನಲ್ ಕತ್ತಿನಲ್ಲಿ ಮದುವೆಗೆ ಕಟ್ಟಿರುವ ತಾಳಿಯೇ ಇದ್ದು, ಇದನ್ನು ನೋಡಿ ನೆಟ್ಟಿಗರು ಅಂತೂ ಸಂಪ್ರದಾಯ ಮರೆಯಲಿಲ್ಲವಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಹಾಡನ್ನೇ ಈ ವಿಚಾರದಲ್ಲಿ ಮೀರಿಸಿದ ಕೃಷ್ಣಂ ಪ್ರಯಣ ಸಖಿ ಹಾಡು ಹೊಸ ರೆಕಾರ್ಡ್