Publish Date: Fri, 16 Aug 2024 (14:02 IST)
Updated Date: Fri, 16 Aug 2024 (14:05 IST)
ಬೆಂಗಳೂರು: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂತೆರೋ ಈಗ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಭಾನುವಾರ ಈ ಜೋಡಿ ವಿವಾಹವಾಗಿದ್ದರು. ಮದುವೆ ಬಳಿಕ ಸೈಲೆಂಟಾಗಿದ್ದ ಜೋಡಿ ಇಂದು ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮದುವೆಗೆ ಹರಸಿದವರಿಗೆ ಧನ್ಯವಾದ ಸಲ್ಲಿಸುವ ಮೂಲಕ ಮೊದಲ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಮದುವೆಯ ಸುಂದರ ಕ್ಷಣಗಳನ್ನೂ ಹಂಚಿಕೊಂಡಿದ್ದಾರೆ.
ಸೋನಲ್ ಮತ್ತು ತರುಣ್ ಮದುವೆ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ನೆರವೇರಿತ್ತು. ಸ್ಯಾಂಡಲ್ ವುಡ್ ನ ಸ್ನೇಹಿತರೆಲ್ಲಾ ಮದುವೆಗೆ ಬಂದು ಶುಭ ಹಾರೈಸಿದ್ದರು. ಮದುವೆ ಬಳಿಕ ಮೊದಲ ಪೋಸ್ಟ್ ಮಾಡಿರುವ ತರುಣ್-ಸೋನಲ್, ನಮ್ಮ ಬ್ಲಾಕ್ ಬ್ಲಸ್ಟರ್ ಜೀವನ ಶುರುವಾಗಿದೆ. ಹರಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ನಿಮ್ಮೆಲ್ಲರ ಪ್ರೀತಿ, ಹಾರೈಕೆ ನಮ್ಮ ಮದುವೆ ಸಮಾರಂಭವನ್ನು ಇನ್ನಷ್ಟು ಸುಂದರವಾಗಿಸಿದೆ. ನಮ್ಮ ಜೀವನದ ಈ ಸುಂದರ ದಿನದ ಕೆಲವೊಂದು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ನಮ್ಮ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿ ಹರಸಿದ ಪ್ರತಿಯೊಬ್ಬ ಪ್ರೀತಿ ಪಾತ್ರರಿಗೂ ನಮ್ಮ ಧನ್ಯವಾದಗಳು. ನಿಮ್ಮಿಂದ ನಮಗಾದ ಸಂತೋಷಕ್ಕೆ ಮೇರೆ ಇಲ್ಲ ಎಂದು ತರುಣ್, ಸೋನಲ್ ಸಂದೇಶ ಬರೆದುಕೊಂಡಿದ್ದಾರೆ.