Publish Date: Fri, 16 Aug 2024 (10:46 IST)
Updated Date: Fri, 16 Aug 2024 (10:51 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ರಾಜ್ ಬಿ ಶೆಟ್ಟಿ ಬಾಲಿವುಡ್ ಗೆ ಹಾರಲಿದ್ದಾರೆ ಎಂಬ ಸುದ್ದಿ ನಡುವೆ ಮಲಯಾಳಂ ಸಿನಿಮಾ ಮಾಡುತ್ತಿರುವ ಸುದ್ದಿ ಕೊಟ್ಟಿದ್ದಾರೆ.
ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂನಲ್ಲಿ ಈಗಾಗಲೇ ಟರ್ಬೊ ಎನ್ನುವ ಸಿನಿಮಾ ಮಾಡಿದ್ದಾರೆ. ಆ ಸಿನಿಮಾದಲ್ಲಿ ಮಮ್ಮುಟ್ಟಿಗೆ ವಿಲನ್ ಆಗಿ ಖಡಕ್ ಪಾತ್ರ ಮಾಡಿ ಮಿಂಚಿದ್ದರು. ಈ ಮೂಲಕ ಮಲಯಾಳಂ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇದರ ನಡುವೆ ಬಾಲಿವುಡ್ ನಲ್ಲಿ ಬಾಬ್ಬಿ ಡಿಯೋಲ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಅದರ ನಡುವೆ ರಾಜ್ ಬಿ ಶೆಟ್ಟಿ ತಮ್ಮ ಮುಂದಿನ ಮಲಯಾಳಂ ಸಿನಿಮಾ ಘೋಷಣೆ ಮಾಡಿದ್ದಾರೆ. ಕೊಂಡಾಲ್ ಎಂಬುದು ರಾಜ್ ಬಿ ಶೆಟ್ಟಿ ಮಲಯಾಳಂನ ಹೊಸ ಸಿನಿಮಾದ ಟೈಟಲ್.
ಈ ಸಿನಿಮಾ ಓಣಂ ವೇಳೆಗೆ ಥಿಯೇಟರ್ ಗೆ ಬರಲಿದೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮತ್ತೊಂದು ವೈವಿದ್ಯಮಯ ಪಾತ್ರದಲ್ಲಿ ಮಾಡುತ್ತಿದ್ದಾರೆ. ಅಜಿತ್ ಮಾಂಪಳ್ಳಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.