Select Your Language

Notifications

webdunia
webdunia
webdunia
webdunia

ಇಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಮಮ್ಮುಟ್ಟಿ ಜೊತೆ ರಿಷಬ್ ಶೆಟ್ಟಿ ಫೈಟ್

Rishab Shetty

Krishnaveni K

ನವದೆಹಲಿ , ಶುಕ್ರವಾರ, 16 ಆಗಸ್ಟ್ 2024 (09:52 IST)
ನವದೆಹಲಿ: ಇಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಲಿದ್ದು, ಕನ್ನಡದ ರಿಷಬ್ ಶೆಟ್ಟಿ ಮತ್ತು ಮಲಯಾಳಂ ಸಿನಿಮಾ ರಂಗದ ದಿಗ್ಗಜ ಮಮ್ಮುಟ್ಟಿ ನಡುವೆ ಶ್ರೇಷ್ಠ ನಟ ಪ್ರಶಸ್ತಿಗಾಗಿ ಫೈಟ್ ನಡೆಯುತ್ತಿದೆ.

2022 ರ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಬಿಡುಗಡೆಯಾದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರಶಸ್ತಿ ನೀಡಲಾಗುತ್ತದೆ. ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಪ್ರಶಸ್ತಿ ಕೊಂಚ ತಡವಾಗಿ ಘೋಷಣೆಯಾಗುತ್ತಿದೆ. ಕಳೆದ ಬಾರಿ ಅಲ್ಲು ಅರ್ಜುನ್ ಪುಷ್ಪ 1 ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು.

ಈ ಬಾರಿ ಕನ್ನಡದ ಕಾಂತಾರ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿ ತುಳುನಾಡಿನ ದೈವಾರಾಧನೆ ಬಗ್ಗೆ ಅದ್ಭುತವಾಗಿ ಪ್ರೇಕ್ಷಕರಿಗೆ ರಸದೌತಣ ಕಟ್ಟಿಕೊಟ್ಟಿದ್ದ ಕಾಂತಾರ ಸಿನಿಮಾದಲ್ಲಿ ನಟನೆಗಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ರೇಸ್ ನಲ್ಲಿದ್ದಾರೆ.

ರೋರ್ಸಾಶ್ಚ್ ಮತ್ತು ನಾನ್ ಪಗಲ್ ನೇರತ್ತ್ ಮಯಕ್ಕಂ ಸಿನಿಮಾದಲ್ಲಿನ  ನಟನೆಗಾಗಿ ಮಮ್ಮುಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ರೇಸ್ ನಲ್ಲಿದ್ದಾರೆ. ಇಂದು ಅಪರಾಹ್ನ 3 ಗಂಟೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಲಿದೆ. ಅಕ್ಟೋಬರ್ ನಲ್ಲಿ ಪ್ರಶಸ್ತಿ ವಿತರಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಿತ್ರ ಗೆಲ್ಲುತ್ತಿಲ್ಲ ಎಂದವರಿಗೆ ಮುಖಕ್ಕೆ ಹೊಡೆದಂತೆ ಮಾಡಿದ ಗೋಲ್ಡನ್ ಸ್ಟಾರ್ ಕೃಷ್ಣಂ ಪ್ರಿಯ ಸಖಿ