Publish Date: Tue, 17 Oct 2023 (16:37 IST)
Updated Date: Tue, 17 Oct 2023 (16:43 IST)
ನವದೆಹಲಿ: 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಶ್ರೇಷ್ಠ ನಟ ಅಲ್ಲು ಅರ್ಜುನ್, ನಟಿ ಅಲಿಯಾ ಭಟ್, ನಿರ್ದೇಶಕ ರಾಜಮೌಳಿ, ಆರ್ ಮಾಧವನ್, ಕೃತಿ ಸನನ್ ಮುಂತಾದವರು ಪ್ರಶಸ್ತಿ ಸ್ವೀಕರಿಸಿದರು. ನಟ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಅಭಿನಯಕ್ಕೆ ಶ್ರೇಷ್ಠ ನಟ, ನಟಿ ಅಲಿಯಾ ಭಟ್, ಕೃತಿ ಸನನ್ ಶ್ರೇಷ್ಠ ನಟಿ, ಆರ್. ಮಾಧವನ್ ರಾಕೆಟರಿ ಸಿನಿಮಾಗಾಗಿ ಅತ್ಯುತ್ತಮ ಸಿನಿಮಾ, ರಾಜಮೌಳಿ ಆರ್ ಆರ್ ಆರ್ ಸಿನಿಮಾ ನಿರ್ದೇಶನಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ರಣಬೀರ್ ಕಪೂರ್, ಕರಣ್ ಜೋಹರ್ ಸೇರಿದಂತೆ ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಸ್ಯಾಂಡಲ್ ವುಡ್ ನಟ ಅನಿರುದ್ಧ್ ಜತ್ಕಾರ್ ಅವರೂ ಭಾರತಿ ವಿಷ್ಣುವರ್ಧನ್ ಅವರ ಜೀವನ ಕುರಿತಾದ ಸಾಕ್ಷ್ಯಚಿತ್ರ ಬಾಳೆ ಬಂಗಾರ ಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದುಕೊಂಡರು. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.