ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಪ್ರತೀ ಬಾರಿಯೂ ಒಂದೊಂದು ಜೋಡಿ ಸೃಷ್ಟಿಯಾಗುತ್ತಿತ್ತು. ಈ ಬಾರಿಯೂ ಅದು ಪುನರಾವರ್ತನೆಯಾಗುವ ನಿರೀಕ್ಷೆಯಿದೆ.
ಬಿಗ್ ಬಾಸ್ ಕನ್ನಡ 10 ರಲ್ಲಿ ಈ ಬಾರಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಸ್ನೇಹ ಬಾಂಧವ್ಯ ಹೆಚ್ಚುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಇಬ್ಬರೂ ವೀಕ್ಷಕರಿಂದ ಕಡಿಮೆ ವೋಟ್ ಪಡೆದು ಒಂದು ವಾರದ ಕಾಲಾವಕಾಶ ಪಡೆದು ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದರು. ಬಳಿಕ ಇಬ್ಬರೂ ವೀಕ್ಷಕ ಮನಗೆಲ್ಲುವಲ್ಲಿ ಸಫಲರಾಗಿದ್ದಾರೆ.
ಇದೀಗ ಇದೇ ಕಾರಣಕ್ಕೆ ಇಬ್ಬರ ನಡುವೆ ದಿನೇ ದಿನೇ ಆಪ್ತತೆ ಹೆಚ್ಚುತ್ತಿದೆ. ಏನೇ ವಿಚಾರ ಬಂದರೂ ಕಾರ್ತಿಕ್ ಮತ್ತು ಸ್ನೇಹ ಒಗ್ಗಟ್ಟಾಗುತ್ತಿರುವುದು ನೋಡಿದರೆ ವೀಕ್ಷಕರು ಮತ್ತೊಂದು ಹೊಸ ಜೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.