ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಡ್ರೋಣ್ ಪ್ರತಾಪ್ ಗೆ ನಿನ್ನೆ ಸಹ ಸ್ಪರ್ಧಿಗಳು ಡೋಂಗಿ ಎಂದು ಕರೆದು ಹಂಗಿಸಿದ್ದರು. 
									
			
			 
 			
 
 			
					
			        							
								
																	ಆದರೆ ಇದೇ ವಿಚಾರ ಅವರಿಗೆ ಈಗ ಪ್ಲಸ್ ಪಾಯಿಂಟ್ ಆಗುವ ನಿರೀಕ್ಷೆಯಿದೆ. ಇಷ್ಟು ದಿನ ಮನೆಯಲ್ಲಿ ಡ್ರೋಣ್ ಪ್ರತಾಪ್ ಬಗ್ಗೆ ಯಾರಿಗೂ ಅಷ್ಟೊಂದು ಗಮನವಿರಲಿಲ್ಲ. ಸೈಲೆಂಟ್ ಆಗಿರುತ್ತಿದ್ದ ಕಾರಣಕ್ಕೆ ವೀಕ್ಷಕರೂ ಅವರ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ.
									
										
								
																	ಆದರೆ ಅವರು ಡ್ರೋಣ್ ತಯಾರಿಸುವ ವಿಚಾರ ಕೆದಕಿ ನಿನ್ನೆ ಮನೆಯಲ್ಲಿ ಸಹ ಸ್ಪರ್ಧಿಗಳು ಕುಹುಕ ಮಾಡಿದ್ದರು. ತುಕಾಲಿ ಸಂತು ಡ್ರೋಣ್ ಅವರೇ ತಯಾರಿಸಲ್ಲ, ಅಂಗಡಿಯಿಂದ ತಂದು ತಾನೇ ತಂದಿದ್ದು ಎನ್ನುತ್ತಾರೆ ಎಂದು ತಮಾಷೆ ಮಾಡಿದ್ದರು. ಇನ್ನು, ಸ್ನೇಹಿತ್ ಅಂತೂ ನೀವು ಡೋಂಗಿ ಎಂದು ನೇರವಾಗಿ ಹೇಳಿದ್ದರು. ಇವರ ಈ ಗಲಾಟೆ ವೀಕ್ಷಕರಿಗೆ ಇಷ್ಟವಾಗಿಲ್ಲ.
									
											
							                     
							
							
			        							
								
																	ಹೊರಗೆ ಪ್ರತಾಪ್ ಬಗ್ಗೆ ಏನೇ ಆಪಾದನೆಗಳಿರಬಹುದು. ಆದರೆ ಅದನ್ನು ಬಿಗ್ ಬಾಸ್ ಮನೆಯೊಳಗೆ ಎತ್ತಿ ಇತರರು ವ್ಯಂಗ್ಯ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ. ಇದೇ ಕಾರಣಕ್ಕೆ ಈ ವಾರ ನಾಮಿನೇಟ್ ಆಗಿರುವ ಪ್ರತಾಪ್ ಪ್ರೇಕ್ಷಕರ ಅನುಕಂಪ ಪಡೆದು ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ.