Select Your Language

Notifications

webdunia
webdunia
webdunia
webdunia

ಬಾಲಿವುಡ್‌ನಲ್ಲಿ ಬಿಗ್‌ ಆಫರ್ ಗಿಟ್ಟಿಸಿಕೊಂಡ ಶ್ರೀಲೀಲಾಗೆ ಹೀರೋ ಯಾರು ಗೊತ್ತಾ

Sreeleela On Bollywood Cinema

Sampriya

ಮುಂಬೈ , ಗುರುವಾರ, 15 ಆಗಸ್ಟ್ 2024 (19:13 IST)
Photo Courtesy X
ಕನ್ನಡ ಕಿಸ್ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಎಂಟ್ರಿಯಾಗಿರುವ ಶ್ರೀಲೀಲಾ ಕೆಲವೇ ದಿನಗಳಲ್ಲಿ ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.

ನಂತರ ಶ್ರೀಮುರುಳಿ ನಾಯಕ ನಟನಾಗಿ ಅಭಿನಯಿಸಿದ ಭರಾಟೆಯಲ್ಲಿ ಮಿಂಚಿದ ಶ್ರೀಲೀಲಾ ಆಮೇಲೆ ಪೆಲ್ಲಿಸಂದ ಸಿನಿಮಾ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ತನ್ನ ಕ್ಯೂಟ್ ಅಭಿನಯ ಹಾಗೂ ಡ್ಯಾನ್ಸ್ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.

ಈಗಾಗಲೇ ತೆಲುಗಿನ ಸ್ಟಾರ್ ಹೀರೋಗಳಾದ ಮಹೇಶ್ ಬಾಬು, ಪವನ್ ಕಲ್ಯಾಣ್ ಜತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇವರಿಗೆ ಬಾಲಿವುಡ್‌ನಿಂದ ಬಿಗ್ ಆಫರ್ ಸಿಕ್ಕಿರುವ ಬಗ್ಗೆ ಸುದ್ದಿಯಿದೆ.

ಹಿಂದಿ ಮಾಧ್ಯಮದಲ್ಲಿ ಇತ್ತೀಚಿನ ವರದಿಯ ಪ್ರಕಾರ ಶ್ರೀಲೀಲಾ ದೊಡ್ಡ ಪ್ರಾಜೆಕ್ಟ್ ಅನ್ನು ಪಡೆದುಕೊಂಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ನಟನೆಯ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ ಎಂದು ಎಂದು ಹೇಳಲಾಗುತ್ತದೆ. ಈ ಸಿನಿಮಾಗೆ ಬಲ್ವಿಂದರ್ ಸಿಂಗ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ವರದಿಯ ಪ್ರಕಾರ ಶ್ರೀಲೀಲಾ ಅವರು ಸ್ಕ್ರಿಪ್ಟ್ ಕೇಳಿದ ತಕ್ಷಣ ಒಪ್ಪಿಗೆ ಸೂಚಿಸಿದ್ದಾರೆ. ಮಹಿಳಾ ಪ್ರಧಾನ ಪಾತ್ರವನ್ನು ಚೆನ್ನಾಗಿ ಬರೆಯಲಾಗಿದೆ ಎಂದು ಹೇಳಲಾಗುತ್ತದೆ ಮತ್ತು ನಿರ್ದೇಶಕರು ತಮ್ಮ ನಿರೂಪಣೆಯಿಂದ ತೆಲುಗು ನಾಯಕಿಯನ್ನು ಮೆಚ್ಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದಲ್ಲಿದ್ದ ಗಂಡನ ಮರೆತು ಗಣೇಶ್ ನೋಡುತ್ತಾ ಕೂತೇ: ಸುಶ್ಮೀತಾ ಜಗ್ಗಪ್ಪ