ನಟ ಅಕ್ಕಿನೇನಿ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ ನಟಿ ಸಮಂತಾ ರುತ್ ಪ್ರಭುಗೆ ಅವರ ಅಭಿಮಾನಿ 'ನೀವು ಚಿಂತಿಸಬೇಡಿ' ನಾವಿದ್ದೇವೆ ಎಂದು ತಮಾಷೆಯ ವಿಡಿಯೋಗಳನ್ನು ಮಾಡಿದ್ದರು. ಇದೀಗ ಹರಿದಾಡುತ್ತಿರುವ ವದಂತಿ ಏನೆಂದರೆ ಸಮಂತಾ ಅವರು ಮತ್ತೇ ಲವ್ನಲ್ಲಿ ಬಿದ್ದಿದ್ದಾರೆ ಅಂತೆ.
'ಸಿಟಾಡೆಲ್: ಹನಿ ಬನ್ನಿ' ನಿರ್ದೇಶಕರೊಂದಿಗೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಯಿದೆ.
'ರಾಜ್ ಮತ್ತು ಡಿಕೆ' ಜೋಡಿಯ ಸಮಂತಾ ಮತ್ತು ರಾಜ್ ಮುಂಬರುವ ಸರಣಿ "ಸಿಟಾಡೆಲ್: ಹನಿ ಬನ್ನಿ" ಸೇರಿದಂತೆ ಹಲವಾರು ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಈ ಧಾರಾವಾಹಿಯ ಚಿತ್ರೀಕರಣದ ವೇಳೆ ಅವರಿಬ್ಬರು ಹತ್ತಿರವಾದರು ಎನ್ನಲಾಗಿದೆ. ಅವರು ಸಮಂತಾ ಅವರ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿದರು, ಇದರಿಂದ ಡೇಟಿಂಗ್ ವದಂತಿ ಹೆಚ್ಚಾಗಿದೆ. ಆದರೆ ಈ ಬಗ್ಗೆ ಸಮಂತಾ ಆಗಲಿ ರಾಜ್ ಆಗಲಿ ಖಚಿತಪಡಿಸಿಲ್ಲ.
ಸದ್ಯ ರಾಜ್ ನಿಡಿಮೋರು ವಿವಾಹವಾಗಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.