Select Your Language

Notifications

webdunia
webdunia
webdunia
webdunia

ಭೀಮ ಯಶಸ್ಸಿನ ನಡುವೆ ಕೆಣಕಿದವರಿಗೆ ಇದೇ ಉತ್ತರ ಎಂದ ದುನಿಯಾ ವಿಜಯ್

Duniya Vijay

Krishnaveni K

ಬೆಂಗಳೂರು , ಗುರುವಾರ, 15 ಆಗಸ್ಟ್ 2024 (12:32 IST)
ಬೆಂಗಳೂರು: ಎರಡನೇ ಬಾರಿಗೆ ನಿರ್ದೇಶಕರಾಗಿ ದುನಿಯಾ ವಿಜಯ್ ಗೆದ್ದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಭೀಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿದೆ. ಈ ಯಶಸ್ಸು ನನ್ನ ಕೆಣಕಿದವರಿಗೆ ಉತ್ತರ ಎಂದಿದ್ದಾರೆ.

ಭೀಮ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಮೊದಲ ಮೂರು ದಿನದಲ್ಲೇ 10 ಕೋಟಿ ರೂ. ಕಲೆಕ್ಷನ್ ದಾಟಿತ್ತು. ಈ ಸಿನಿಮಾ ಬಿಡುಗಡೆಗೆ ಮುನ್ನ ದರ್ಶನ್ ಫ್ಯಾನ್ಸ್ ಬಹಿಷ್ಕಾರದ ಅಭಿಯಾನ ಮಾಡಿದ್ದರು. ಆದರೆ ಎಲ್ಲವನ್ನೂ ಮೀರಿ ಭೀಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿದ್ದಾನೆ.

ಈ ಯಶಸ್ಸಿನಿಂದ ಉಬ್ಬಿಹೋಗಿರುವ ದುನಿಯಾ ವಿಜಯ್ ಈ ಯಶಸ್ಸು ನನ್ನ ಕೆಣಕಿದವರಿಗೆ ಉತ್ತರ ಎಂದಿದ್ದಾರೆ. ನನಗೆ ಸ್ವತಂತ್ರವಾಗಿ ಸಿನಿಮಾ ಮಾಡಲು ಅವಕಾಶ ಕೊಟ್ಟ ನಿರ್ಮಾಪಕರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ಸಿನಿಮಾ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟ ತೃಪ್ತಿ ಅವರಿಗಿದೆ.

ಇತ್ತೀಚೆಗೆ ಕನ್ನಡ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ ಎಂಬ ಅಪವಾದಗಳಿವೆ. ಆದರೆ ಭೀಮ ಅದನ್ನು ತೊಡೆದು ಹಾಕಿದೆ. ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ ಪ್ರೇಕ್ಷಕರು ಥಿಯೇಟರ್ ಗೆ ಬಂದೇ ಬರುತ್ತಾರೆ, ಕನ್ನಡ ಚಿತ್ರರಂಗ ಗೆದ್ದೇ ಗೆಲ್ಲುತ್ತದೆ ಎಂಬುದಕ್ಕೆ ಭೀಮ ಸಿನಿಮಾ ಉತ್ತರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನ ಈ ಸ್ಟಾರ್ ಜೊತೆ ನಟಿಸಲಿದ್ದಾರೆ ಕನ್ನಡದ ರಾಜ್ ಬಿ ಶೆಟ್ಟಿ