Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಈ ಸ್ಟಾರ್ ಜೊತೆ ನಟಿಸಲಿದ್ದಾರೆ ಕನ್ನಡದ ರಾಜ್ ಬಿ ಶೆಟ್ಟಿ

Raj B Shetty

Krishnaveni K

ಬೆಂಗಳೂರು , ಗುರುವಾರ, 15 ಆಗಸ್ಟ್ 2024 (12:03 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕ್ರಿಯಾತ್ಮಕ ಸಿನಿಮಾ ಮೂಲಕ ಗಮನ ಸೆಳೆದಿದ್ದ ರಾಜ್ ಬಿ ಶೆಟ್ಟಿ ಈಗ ಬಾಲಿವುಡ್ ನತ್ತ ಹಾರಲಿದ್ದಾರೆ. ಬಾಲಿವುಡ್ ನ ಈ ಸ್ಟಾರ್ ಜೊತೆ ರಾಜ್ ಬಿ ಶೆಟ್ಟಿ ಸಿನಿಮಾ ಮಾಡಲಿದ್ದಾರೆ.

ಈಗಾಗಲೇ ರಾಜ್ ಬಿ ಶೆಟ್ಟಿ ಮಲಯಾಳಂನ ಸ್ಟಾರ್ ನಟ ಮಮ್ಮುಟ್ಟಿಜೊತೆ ಟರ್ಬೊ ಸಿನಿಮಾದಲ್ಲಿ ನಟಿಸಿ ಪರಭಾಷಿಕರ ಗಮನ ಸೆಳೆದಿದ್ದಾರೆ. ಇದೀಗ ಮಾಲಿವುಡ್ ನಿಂದ ಬಾಲಿವುಡ್ ಗೆ ಹಾರಲಿದ್ದಾರೆ. ಯಾಕೋ ಇತ್ತೀಚೆಗೆ ಕನ್ನಡದಲ್ಲಿ ರಾಜ್ ಬಿ ಶೆಟ್ಟಿಗೆ ಸಿನಿಮಾ ಕೈ ಹಿಡಿಯುತ್ತಿಲ್ಲ. ಆದರೆ ಪರಭಾಷೆಯಲ್ಲಿ ಅವರಿಗೆ ಆಫರ್ ಗಳು ಬರುತ್ತಿವೆ.

ಬಾಲಿವುಡ್ ನ ಖ್ಯಾತ ನಟ ಬಾಬ್ಬಿ ಡಿಯೋಲ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಆಫರ್ ಬಂದಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಲಿದ್ದಾರೆ. ಟೈಟಲ್ ಮತ್ತು ತಾರಾಗಣದ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ. ಆದರೆ ರಾಜ್ ಬಿ ಶೆಟ್ಟಿಯನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂಬ ಮಾಹಿತಿಯಿದೆ.

ರಾಜ್ ಬಿ ಶೆಟ್ಟಿ ಅಭಿನಯದ ರೂಪಾಂತರ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದೀಗ ಅರ್ಜುನ್ ಜನ್ಯಾ ನಿರ್ದೇಶನದಲ್ಲಿ 45 ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದು ಅವರ ಕನ್ನಡದ ಪ್ರಾಜೆಕ್ಟ್ ಗಳು. ಇದೀಗ ಬಾಲಿವುಡ್ ನಲ್ಲೂ ಕಮಾಲ್ ಮಾಡಲು ಹೊರಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಕೌಟ್‌ ಮಾಡುವಾಗ ಗಾಯ, ಸದ್ಯ ಶೂಟಿಂಗ್‌ಗೆ ಬ್ರೇಕ್ ನೀಡಿದ ಜೂ.ಎನ್‌ಟಿಆರ್‌