Select Your Language

Notifications

webdunia
webdunia
webdunia
webdunia

ಕಾಂತಾರ ಹಾಡನ್ನೇ ಈ ವಿಚಾರದಲ್ಲಿ ಮೀರಿಸಿದ ಕೃಷ್ಣಂ ಪ್ರಯಣ ಸಖಿ ಹಾಡು ಹೊಸ ರೆಕಾರ್ಡ್

Krishnam Priya Sakhi

Krishnaveni K

ಬೆಂಗಳೂರು , ಸೋಮವಾರ, 19 ಆಗಸ್ಟ್ 2024 (10:30 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಯಣ ಸಖಿ ಸಿನಿಮಾ ಹಾಡುಗಳು ಈಗ ಭರ್ಜರಿ ಹಿಟ್ ಆಗಿವೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಡುಗಳು ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಿವೆ.

ಈ ಸಿನಿಮಾದ ಜೇನ ದನಿಯೋಳೆ ಹಾಡು ಈಗ ಎಲ್ಲಿ ಹೋದರಲ್ಲಿ ಕೇಳಿಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ರೀಲ್ಸ್ ನೋಡಿದರೂ ಇದೇ ಹಾಡು. ಹಾಡು ಇಷ್ಟೊಂದು ಟ್ರೆಂಡ್ ಆಗಿರುವ ಕಾರಣಕ್ಕೇ ಸಿನಿಮಾ ಕೂಡಾ ಥಿಯೇಟರ್ ನಲ್ಲಿ ಒಳ್ಳೆ ಕಮಾಯಿ ಮಾಡಿದೆ ಎನ್ನಬಹುದು.

ಈಗ ಜೇನ ದನಿಯೋಳೆ ಹಾಡು ಇನ್ನೊಂದು ರೆಕಾರ್ಡ್ ಮಾಡಿದೆ. ಸೋಷಿಯಲ್ ಮೀಡಿಯಾ ರೀಲ್ಸ್ ನಲ್ಲಿ ಈ ಹಾಡು ಅತೀ ಹೆಚ್ಚು ಬಾರಿ ರೀಲ್ಸ್ ನಲ್ಲಿ ಬಳಕೆಯಾದ ದಾಖಲೆ ಮಾಡಿದೆ. ಇದಕ್ಕೆ ಮೊದಲು ರಿಷಬ್ ಶೆಟ್ಟಿ ನಾಯಕಾರಿಗುವ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಈ ದಾಖಲೆ ಮಾಡಿತ್ತು.

ಈಗ ದ್ವಾಪರ ಹಾಡು ಆ ದಾಖಲೆಯನ್ನೂ ಮೀರಿ ಅಧಿಕ ಬಾರಿ ಡೌನ್ ಲೋಡ್ ಆದ ದಾಖಲೆ ಮಾಡಿದೆ. ಸಿಂಗಾರ ಸಿರಿಯೇ ಹಾಡು ಒಟ್ಟು 587 ಸಾವಿರ ಬಾರಿ ರೀಲ್ಸ್ ನಲ್ಲಿ ಬಳಕೆಯಾಗಿ ದಾಖಲೆ ಮಾಡಿತ್ತು. ಇದೀಗ ದ್ವಾಪರ ಹಾಡು 591 ಸಾವಿರ ಬಾರಿ ರೀಲ್ಸ್ ನಲ್ಲಿ ಬಳಕೆಯಾಗಿ ಹೊಸ ದಾಖಲೆ ಮಾಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಪ್ರಭಾಸ್ ಮುಂದಿನ ಸಿನಿಮಾಗೆ ನಾಯಕಿಯಾದ ಇಮಾನ್ವಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ