Select Your Language

Notifications

webdunia
webdunia
webdunia
webdunia

ತರುಣ್ ಜತೆ ಸಪ್ತಪದಿ ತುಳಿದ ಸೋನಾಲ್: ತಾರಾ ಜೋಡಿ ಮದುವೆಯಲ್ಲಿ ಸ್ಯಾಂಡಲ್‌ವುಡ್‌ ಗಣ್ಯರ ದಂಡು

Tarun Sudhir Sonal Marriage

Sampriya

ಬೆಂಗಳೂರು , ಭಾನುವಾರ, 11 ಆಗಸ್ಟ್ 2024 (12:21 IST)
Photo Courtesy X
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಅವರ ಮದುವೆ ಇಂದು ಅದ್ಧೂರಿಯಾಗಿ ನೆರವೇರಿತು.

 ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೆಸ್ ನಲ್ಲಿ  ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ನಿನ್ನೆ ಸಂಜೆ ಈ ನವ ಜೋಡಿಯ ಅದ್ದೂರಿ ಆರತಕ್ಷತೆ ಸಮಾರಂಭ ನಡೆದಿದ್ದು, ಚಿತ್ರರಂಗದ, ರಾಜಕೀಯದ ಗಣ್ಯರು ಭಾಗವಹಿಸಿ ವಧು ವರರಿಗೆ ಶುಭ ಹಾರೈಸಿದರು.  

ಇಂದು ಬೆಳಿಗಿನಿಂದ ವಿವಾಹದ ಶಾಸ್ತ್ರಗಳು ನಡೆಯುತ್ತಿದ್ದು, ಚಿತ್ರರಂಗದ ಗಣ್ಯಾಥಿ ಗಣ್ಯರು ಹಾಜರಾಗಿದ್ದಾರೆ.

ನಟ ಪ್ರೇಮ್, ಶರಣ್, ಗಣೇಶ್, ನಿರೂಪಕಿ ಅನುಶ್ರೀ, ನಟಿಯರಾದ ಮೇಘಾಶೆಟ್ಟಿ, ನಿಶ್ವಿಕಾ ನಾಯ್ಡು, ಸಂಜನಾ ಗಲ್ರಾನಿ, ಹರ್ಷಿಕಾ ಪೂಣಚ್ಚ, ಗಿರಿಜಾ ಲೊಕೇಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ.

ತರುಣ್ ಸುಧೀರ್ ಅವರು ಆ್ಯಕ್ಷನ್ ಕಟ್ ಹೇಳಿರುವ ನಟ ದರ್ಶನ್ ನಾಯಕ ನಟನಾಗಿ ನಟಿಸಿರುವ ರಾಬರ್ಟ್ ಸಿನಿಮಾದಲ್ಲಿ ಸೋನಾಲ್ ಅವರು ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು.  ಸೆಟ್‌ನಲ್ಲಿ ಶುರುವಾದ ಇವರಿಬ್ಬರ ಸ್ನೇಹ, ನಂತರ ಪ್ರೀತಿಗೆ ತಿರುಗಿದೆ.

ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವಿಚಾರ ಈಚೆಗೆ ಲೀಕ್ ಆಗಿತ್ತು. ಇದಾದ ಬೆನ್ನಲ್ಲೇ ತರುಣ್ ಹಾಗೂ ಸೋನಾಲ್ ತಮ್ಮ ಮದುವೆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ದೃಢಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಲಹೆಗಳೆಲ್ಲಾ ಮುಗಿದು ಒಂದಾಯಿತು ಕೋಟೆ ಮನೆ: 'ಅಣ್ಣಯ್ಯ'ಗೆ ದಾರಿಮಾಡಿ ಕೊಟ್ಟ 'ಸತ್ಯ' ಸೀರಿಯಲ್