Select Your Language

Notifications

webdunia
webdunia
webdunia
webdunia

ಕಲಹೆಗಳೆಲ್ಲಾ ಮುಗಿದು ಒಂದಾಯಿತು ಕೋಟೆ ಮನೆ: 'ಅಣ್ಣಯ್ಯ'ಗೆ ದಾರಿಮಾಡಿ ಕೊಟ್ಟ 'ಸತ್ಯ' ಸೀರಿಯಲ್

Sathya Serial End Episode

Sampriya

ಬೆಂಗಳೂರು , ಶನಿವಾರ, 10 ಆಗಸ್ಟ್ 2024 (20:44 IST)
Photo Courtesy X
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ 'ಅಣ್ಣಯ್ಯ' ಸೀರಿಯಲ್ ಶುರುವಾಗುತ್ತಿರುವ ಬೆನ್ನಲ್ಲೇ ಸತ್ಯ ಸೀರಿಯಲ್‌ ಅನ್ನು ಅಂತ್ಯ ಮಾಡಲಾಗಿದೆ. ಇಂದಿನ ಸಂಚಿಕೆಯೊಂದಿಗೆ ಸತ್ಯ ಸೀರಿಯಲ್ ಕೊನೆಗೊಂಡಿದೆ.

'ಸತ್ಯ' ಧಾರಾವಾಹಿ ಅಂತ್ಯವಾಗುತ್ತಿರುವ ಬಗ್ಗೆ ವಾಹಿನಿಯಿಂದಲೇ ಸ್ಪಷ್ಟಣೆ ನೀಡಲಾಗಿದ್ದು, ಇಂದು ಕಲಹಗಳೆಲ್ಲಾ ಮುಗಿದು ಕೋಟೆ ಮನೆ ಒಂದಾಗಿರುವ ಸಂಚಿಕೆಯೊಂದಿಗೆ ಸೀರಿಯಲ್‌ ಅಂತ್ಯ ಮಾಡಲಾಗಿದೆ.

ಹೊಸದಾಗಿ 'ಅಣ್ಣಯ್ಯ' ಧಾರಾವಾಹಿ ಪ್ರಸಾರ ಆಗಲಿದೆ. ಹೀಗಾಗಿ ಬೇರೆ ಧಾರಾವಾಹಿಯ ಸಮಯದ ಬದಲಾವಣೆ ಮಾಡಲಾಗಿತ್ತು. 7.30ಗೆ ಪ್ರಸಾರ ಆಗುತ್ತಿದ್ದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಇನ್ಮುಂದೆ 6.30ಗೆ ಪ್ರಸಾರ ಆಗಲಿದೆ. 'ಅಣ್ಣಯ್ಯ' ಧಾರಾವಾಹಿಯು 7.30ಗೆ ಪ್ರಸಾರ ಆಗಲಿದೆ.

2020 ಶುರುವಾದ ಸತ್ಯ ಸೀರಿಯಲ್ ಆರಂಭದ ದಿನಗಳಲ್ಲಿ ಟಿಆರ್‌ಪಿಯಲ್ಲಿ ಟಾಪ್ 5 ಸ್ಥಾನದಲ್ಲಿತ್ತು. ಇತ್ತೀಚೆಗೆ ಈ ಸೀರಿಯಲ್‌ನ ಟಿಆರ್‌ಪಿ ಕಡಿಮೆ ಆಗಿದ್ದರಿಂದ ಧಾರವಾಹಿ ಮುಕ್ತಾಯ ಮಾಡುತ್ತಿರುವ ಬಗ್ಗೆ ಸುದ್ದಿ ಹಬ್ಬಿತ್ತು. ಇದೀಗ ಅದರಂತೆ ಸತ್ಯ ಸೀರಿಯಲ್‌ ಅನ್ನು ಮುಕ್ತಾಯಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರುಣ್, ಸೋನಲ್ ಅರಿಶಿನ ಶಾಸ್ತ್ರದಲ್ಲಿ ಕುಣಿದು ಕುಪ್ಪಳಿಸಿದ ಶರಣ್, ಪ್ರೇಮ್, ಮೇಘಾ ಶೆಟ್ಟಿ