Select Your Language

Notifications

webdunia
webdunia
webdunia
webdunia

ಜೊತೆ ಜೊತೆಯಲಿ ಪುಷ್ಪ ಸಿರಿಮನೆ ಇವರೇನಾ ಅಂತ ಶಾಕ್ ಆದ ನೆಟ್ಟಿಗರು

ಜೊತೆ ಜೊತೆಯಲಿ ಪುಷ್ಪ ಸಿರಿಮನೆ ಇವರೇನಾ ಅಂತ ಶಾಕ್ ಆದ ನೆಟ್ಟಿಗರು

Sampriya

ಬೆಂಗಳೂರು , ಭಾನುವಾರ, 12 ಮೇ 2024 (10:31 IST)
Photo Courtesy X
ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ 'ಅನು' ತಾಯಿಯಾಗಿ ಪುಷ್ಪಾ ಸಿರಿಮನೆ ಪಾತ್ರದ ಮೂಲಕ ಮನೆ ಮಾತಾದವರು ಕಲಾವಿದೆ ಅಪೂರ್ವ ಶ್ರೀ ಅವರು.

ತನ್ನ ನೈಜ ಅಭಿನಯದ ಮೂಲಕವೇ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ  ಅಪೂರ್ವ ಅವರು  ತಾಯಿ ಪಾತ್ರಗಳಿಗೆ ಜೀವ ತುಂಬಿದವರು. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಸುಬ್ಬು ತಾಯಿಯಾಗಿ, ಮಧ್ಯಮ ಕುಟುಂಬದ ತಾಯಿಯಾಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಶೂಟಿಂಗ್‌ನಿಂದ ಬ್ರೇಕ್ ಪಡೆದ ಅಪೂರ್ವ ಮಗಳು ರಾಜ್ವಿ ಜತೆಗೆ ಲಕ್ಷದ್ವೀಪಕ್ಕೆ ಹಾರಿದ್ದಾರೆ. ವೆಕೇಷನ್‌ ಅನ್ನು ಭರ್ಜರಿಯಾಗಿಯೇ ಎಂಜಾಯ್‌ ಮಾಡುತ್ತಿರುವ ಇವರು ತುಂಬಾನೇ ಹಾಟ್ ಡ್ರೆಸ್‌ನಲ್ಲಿ  ಫೋಟೋಗೆ ಫೋಸ್ ನೀಡಿದ್ದಾರೆ. ವಿಶೇಷ ಏನೆಂದರೆ ಮಗಳು ರಾಜ್ವಿ ಮೈತುಂಬ ಬಟ್ಟೆ ಹಾಕಿಕೊಂಡಿದ್ದರೆ ತಾಯಿ ಅಪೂರ್ವ ಮಿನಿ ಸ್ಕರ್ಟ್‌ನಲ್ಲಿ ಹಾಟ್‌ ಆಗಿ ಲುಕ್ ಕೊಟ್ಟಿದ್ದಾರೆ.

ನಟಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಕೆಲವರು ಸೂಪರ್ ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು
'ಈ ಕಣ್ಣಲ್ಲಿ ಏನನ್ನೂ ನೋಡಬೇಕೆಂದು' ಕಮೆಂಟ್ ಮಾಡಿದ್ದಾರೆ.

ಎಲ್ರೂ ಅಷ್ಟೇ ಅಲ್ವಾ ಮಮ್.., ಮೂವೀ ಅಥವಾ ಧಾರವಾಹಿಯಲ್ಲಿ ಒಂದು ಸಣ್ಣ ಪಾತ್ರ ಸಿಕ್ಕಿದ್ರು ಕೂಡ ತಮ್ಮ dressing sense change ಆಗಿಬಿಡುತ್ತೆ ಅಲ್ವಾ...  ಎಂದು ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ಮಿಲನ ಮುಖದಲ್ಲಿ ನಗು ತಂದ ಡಾರ್ಲಿಂಗ್ ಕೃಷ್ಣ ಅಪ್ಪುಗೆ