Publish Date: Sat, 10 Aug 2024 (17:06 IST)
Updated Date: Sat, 10 Aug 2024 (17:10 IST)
ಬೆಂಗಳೂರು: ತಮಿಳು ಬಿಗ್ ಬಾಸ್ ಶೋನ ಈ ಆವೃತ್ತಿಯಿಂದ ಕಮಲ್ ಹಾಸನ್ ಅವರು ಹೊರನಡೆದ ಬೆನ್ನಲ್ಲೇ, ಕನ್ನಡದ ಬಿಗ್ ಬಾಸ್ ಶೋನಿಂದ ಕಿಚ್ಚ ಸುದೀಪ್ ಹೊರ ನಡೆಯುತ್ತಾರೆಂಬ ಗುಸು ಗುಸು ಶುರುವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಜೋರಾಗಿ ಸದ್ದು ಮಾಡುತ್ತಿದ್ದು, ಇದರಿಂದ ಕನ್ನಡ ಬಿಗ್‌ಬಾಸ್ ಅಭಿಮಾನಿಗಳು ಬೇಜಾರಾಗಿದ್ದಾರೆ. ಇನ್ನೂ ಒಂದುವೇಳೆ ಸುದೀಪ್ ಅವರು ಈ ಸ್ಥಾನದಿಂದ ಹೊರನಡೆದರೆ ಇದನ್ನು ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿ ಅಥವಾ ನಟ ರಮೇಶ್ ಅರವಿಂದ್ ನಡೆಸಲಿದ್ದಾರೆ ಎಂಬ ವಿಚಾರವಿದೆ. ಕಲರ್ಸ್ ಕನ್ನಡ ಮೂಲಗಳ ಪ್ರಕಾರ ಇದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದಿದೆ. ಆದರೆ ಇದುವರೆಗೂ ಈ ಬಗ್ಗೆ ಸ್ಪಷ್ಟಣೆ ಸಿಕ್ಕಿಲ್ಲ.
ನಟ ಸುದೀಪ್ ಅವರು ಯಶಸ್ವಿಯಾಗಿ 10 ಕನ್ನಡ ಬಿಗ್‌ಬಾಸ್ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇನ್ನೂ ಸುದೀಪ್ ಅವರ ಸ್ಟೈಲಿಶ್ ಲುಕ್ ಅನ್ನು ವೀಕೆಂಡ್‌ನಲ್ಲಿ ನೋಡಲು, ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುವ ಖಡಕ್ ಮಾತನ್ನು ಕೇಳಲು ಅವರ ಅಭಿಮಾನಿಗಳು ಕಾಯುತ್ತಿರುತ್ತಾರೆ.
ಇನ್ನೂ ಮೂಲಗಳ ಪ್ರಕಾರ ಸುದೀಪ್ ಅವರೇ ಈ ಸೀಸನ್ ಅನ್ನು ನಡೆಸಿಕೊಡುತ್ತಾರೆ. ಸುದೀಪ್ ಅವರ 'ಮ್ಯಾಕ್ಸ್' ಶೂಟಿಂಗ್ ಮುಗಿದಿದ್ದು. ಈ ಬಾರಿಯೂ ಅವರೇ ಯಶಸ್ವಿಯಾಗಿ ಬಿಗ್‌ಬಾಸ್ ಆವೃತ್ತಿಯನ್ನು ನಡೆಸಿಕೊಡುತ್ತಾರೆಂಬ ವಿಚಾರವು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ನಟ ರಿಷಭ್ ಶೆಟ್ಟಿ ಅವರು ಸದ್ಯ ಕಾಂತಾರ ಪ್ರೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ರಿಯಾಲಿಟಿ ಶೋಗೆ ಬರುವ ಯೋಚನೆಯೂ ಅವರಿಗಿಲ್ಲ ಎನ್ನಲಾಗಿದೆ.