ನಟ ಕಿಚ್ಚ ಸುದೀಪ್ ಅವರು ಮುನ್ನಡೆಸುವ ಬಿಗ್‌ಬಾಸ್ ಶೋ ಎಲ್ಲವೂ ಅಂದುಕೊಂಡರೆ ಎಂದಿನಂತೆ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗಲಿದೆ. ಈಗಾಗಲೇ ಕಿಚ್ಚನ ನೇತೃತ್ವದಲ್ಲಿ 10ಸೀಸನ್‌ಗಳು ಯಶಸ್ವಿಯಾಗಿ ಮುಗಿದಿದ್ದು, ಇದೀಗ 11ನೇ ಆವೃತ್ತಿಗೆ ತಯಾರಿ ನಡೆಯುತ್ತಿದೆ.
ಇನ್ನೂ ಶೋ ಶುರುವಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದ ಹಾಗೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ವೈರಲ್ ಮಾಡಲಾಗುತ್ತಿದೆ. ವಿಶೇಷ ಏನೆಂದರೆ ಈ ಬಾರಿಯ ಶೋನಲ್ಲಿ ಜೋಡಿಗಳು ಎಂಟ್ರಿ ಕೊಡಲಿದ್ದಾರೆಂಬ ಸುದ್ದಿಯಿದೆ.
ಸಿನಿಮಾ, ಕಿರುತೆರೆ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಫೇಮಸ್ ಮುಖಗಳು ದೊಡ್ಮನೆ ಪ್ರವೇಶಿಸಲಿದ್ದಾರೆ. ಇನ್ನೂ ಈ ಬಾರಿ ಕೂಡ ರಾಜಕೀಯ ರಂಗದ ವ್ಯಕ್ತಿಗಳು ಎಂಟ್ರಿಯಾಗುತ್ತಾರೆಂಬ ಮಾಹಿತಿಯಿದೆ. ಇನ್ನೂ ಕಳೆದ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಈ ಬಾರಿ ಸ್ಪರ್ಧಿಯಾಗಿ ಎಂಟ್ರಿಯಾಗುತ್ತಾರೆ ಎಂಬ ಲೆಕ್ಕಚಾರದಲ್ಲಿ ಬಿಗ್‌ಬಾಸ್ ಪ್ರಿಯರಿದ್ದಾರೆ.
ಆದರೆ ಪ್ರತಿ ಬಾರಿಯೂ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದರು, ಅದರಲ್ಲಿ ಕೆಲವರು ಹೊಸಬರ ಸೇರ್ಪಡೆಯಾಗುತ್ತಲೇ ಇರುತ್ತಾರೆ. ಇನ್ನೂ ಈ ಬಾರಿ ಏನೆಲ್ಲ ಬಿಗ್‌ಬಾಸ್ ತಂಡದಿಂದ ಅಚ್ಚರಿ ಸಿಗಲಿದೆ ಎಂಬುದಕ್ಕೆ ಕಾದು ನೋಡಬೇಕಿದೆ.