Select Your Language

Notifications

webdunia
webdunia
webdunia
Wednesday, 9 April 2025
webdunia

ದೊಡ್ಮನೆ ಆಫರ್ ಬಗ್ಗೆ ನಟಿ ಜ್ಯೋತಿ ರೈ ಫಸ್ಟ್ ರಿಯಾಕ್ಷನ್ ಹೀಗಿತ್ತು

Jyothi Poorvaj On Big Boss

Sampriya

ಬೆಂಗಳೂರು , ಶುಕ್ರವಾರ, 9 ಆಗಸ್ಟ್ 2024 (14:59 IST)
Photo Courtesy X
ಕಾಲಿವುಡ್‌ ಅಂಗಳದಲ್ಲಿ ಬ್ಯುಸಿಯಾಗಿರುವ ಕನ್ನಡದ ನಟಿ ಜ್ಯೋತಿ ರೈ ಅವರು ಈ ಆವೃತ್ತಿಯ ಕನ್ನಡ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಬರಲಿದ್ದಾರೆಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇದೀಗ ಈ ಸುದ್ದಿ ಬಗ್ಗೆ ಜ್ಯೋತಿ ರೈ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ನಾನು ಬಿಗ್‌ಬಾಸ್‌ಗೆ ಬರಲಿದ್ದೇನೆ ಎಂಬುದರ ಬಗ್ಗೆ ಹಲವು ಮಂದಿ ನನ್ನ ಬಳಿ ಕೇಳಿದ್ದಾರೆ.  ನನಗೆ ಕನ್ನಡ ಬಿಗ್‌ಬಾಸ್ ತಂಡದಿಂದ ಆಹ್ವಾನ ಬಂದಿತ್ತು. ಆದರೆ ಈ ಮೊದಲೇ  ಹಲವು ಕೆಲಸಗಳನ್ನು ಒಪ್ಪಿಕೊಂಡಿರುವ ಕಾರಣ ನಾನು ಬಿಗ್‌ಬಾಸ್ ಆಫರ್‌ ಅನ್ನು ತಿರಸ್ಕರಿಸಿದ್ದೇನೆ. ನನಗೆ ಈ  ಅವಕಾಶ ನೀಡಿದಕ್ಕೆ ಹಾಗೂ ಪ್ರೀತಿ ಮತ್ತು ಬೆಂಬಲವನ್ನು ನೀಡುವ ನನ್ನ ಅಭಿಮಾನಿಗಳಿಗೆ ಚಿರಋಣಿ ಎಂದು ಜ್ಯೋತಿ ರೈ ಬರೆದಿದ್ದಾರೆ.

ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಜ್ಯೋತಿ ರೈ ಅವರು ತಮ್ಮ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ತದನಂತರ ಕಾಲಿವುಡ್‌ನಲ್ಲಿ ಸೀರಿಯಲ್‌ ಬ್ಯುಸಿ ಆಗಿರುವ ಜ್ಯೋತಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್‌ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತಡೇ ಸಂಭ್ರಮದಲ್ಲಿರುವ ಮಹೇಶ್‌ ಬಾಬು ಪತ್ನಿಯಿಂದ ವಿಶೇಷ ಶುಭಹಾರೈಕೆ