Select Your Language

Notifications

webdunia
webdunia
webdunia
webdunia

2036ರ ಒಲಿಂಪಿಕ್ಸ್ ಭಾರತದಲ್ಲಿ ಆಯೋಜನೆಗೆ ಸಕಲ ತಯಾರಿ: ಕೆಂಪುಕೋಟೆಯಲ್ಲಿ ನರೇಂದ್ರ ಮೋದಿ ಮಹತ್ವದ ಘೋಷಣೆ

Prime Minister Narendra Modi

Sampriya

ನವದೆಹಲಿ , ಗುರುವಾರ, 15 ಆಗಸ್ಟ್ 2024 (18:09 IST)
ನವದೆಹಲಿ: ಪ್ಯಾರಿಸ್‌ನಲ್ಲಿ ನಡೆದ 33ನೇ ಒಲಿಂಪಿಕ್ಸ್‌ಗೆ ತೆರೆಬಿದ್ದಿದೆ. 2028ರ ಒಲಿಂಪಿಕ್ಸ್‌ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದೆ. 2032ರ ಕ್ರೀಡಾಕೂಟವು ಆಸ್ಟ್ರೇಲಿಯಾ ಬ್ರಿಸ್ಬೇನ್‌ನಲ್ಲಿ ಆಯೋಜನೆಯಾಗಲಿದೆ. ಇದೀಗ 2036ರ ಒಲಿಂಪಿಕ್ಸ್‌ ಆಯೋಜನೆಗೆ ವಿಶ್ವಮಟ್ಟದಲ್ಲಿ ಪೈಪೋಟಿ ಹೆಚ್ಚಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು 78ನೇ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, 2036 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಸಂಕಲ್ಪವನ್ನು ಹೊಂದಿದೆ ಎನ್ನುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಭಾರತ ದೇಶವು ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಭಾರತದ ನೆಲದಲ್ಲಿ ನಡೆಯಬೇಕು ಎಂಬುದು ಭಾರತದ ಕನಸಾಗಿದೆ. ಅದಕ್ಕಾಗಿ ತಯಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದೇವೆ  ಎಂದು ಮೋದಿ ಪುನರುಚ್ಚರಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಆಟಗಾರರನ್ನು ಅಭಿನಂದಿಸಿದ ಪ್ರಧಾನಿ ಮೋದಿ,  ಒಲಂಪಿಕ್ಸ್ ಜಗತ್ತಿನಲ್ಲಿ ಭಾರತದ ಧ್ವಜವನ್ನು ಹಾರಿಸಿದ ಆ ಯುವಕರು ಇಂದು ತ್ರಿವರ್ಣ ಧ್ವಜದ ಕೆಳಗೆ ನಮ್ಮೊಂದಿಗೆ ಕುಳಿತಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ್ಮ ದೇಶದ ಎಲ್ಲಾ ಆಟಗಾರರನ್ನು ಅಭಿನಂದಿಸುತ್ತೇನೆ ಎಂದರು.

ಮುಂದಿನ ವರ್ಷ ಐಒಸಿ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಆ ಬಳಿಕವಷ್ಟೇ 2036ರ ಒಲಿಂಪಿಕ್ಸ್‌ ಆತಿಥ್ಯ ವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದ ಪೈಲ್ವಾನ ಅಮನ್‌ ಸೆಹ್ರಾವತ್​ಗೆ ರೈಲ್ವೆ ಇಲಾಖೆಯಿಂದ ಭರ್ಜರಿ ಗಿಫ್ಟ್‌