Select Your Language

Notifications

webdunia
webdunia
webdunia
Sunday, 13 April 2025
webdunia

ರಾಜನಾಗಿದ್ದವರನ್ನು ಹಾಗೇ ನೋಡಲು ಕಷ್ಟವಾಯಿತು: ದರ್ಶನ್ ಭೇಟಿಯಾದ ರಚಿತಾ ರಿಯ್ಯಾಕ್ಷನ್

Rachita Ram On Darshan

Sampriya

ಬೆಂಗಳೂರು , ಗುರುವಾರ, 22 ಆಗಸ್ಟ್ 2024 (17:47 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಳೆದ ಎರಡು ತಿಂಗಳಿನಿಂದ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ.

ಭೇಟಿ ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ರಾಜ, ರಾಜನ ಹಾಗೇ ಇದ್ದರೆ ನೋಡಕ್ಕೆ ಚಂದಾ, ಅವರನ್ನು ಆ ಸ್ಥಿತಿಯಲ್ಲಿ ನೋಡಲು ಕಷ್ಟವಾಯಿತು. ಅವರ ಆರೋಗ್ಯವಾಗಿದ್ದು, ಕಾನೂನಿನ ಮೇಲೆ ನಂಬಿಕೆಯಲ್ಲಿದ್ದಾರೆ.

ನಾನು ದರ್ಶನ್ ಅವರ ಅಭಿಮಾನಿ. ಅದಲ್ಲದೆ ನನ್ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದೆ ಅವರು. ಅಂದು ಅವರು ನನ್ನನ್ನು ಬೇಡ ಅನ್ನುವ ಒಂದು ಮಾತು ಹೇಳುತ್ತಿದ್ದರೆ, ಬಿಂದ್ಯಾ, ರಚಿತಾ ರಾಮ್ ಆಗುತ್ತಿರುಲಿಲ್ಲ. ಕಳೆದ ಎರಡು ತಿಂಗಳಿನಿಂದ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೆ. ನನಗೆ ಮನಸ್ಸು ತಡಿಯಲಿಲ್ಲ, ಹಾಗಾಗಿ ಬಂದು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಇದೀಗ ಮನಸ್ಸು ನಿರಳವಾಯಿತು. ಆದಷ್ಟು ಬೇಗ ಹೊರಬನ್ನಿ ಎಂದು ಹಾರೈಸಿದೆ.

ಅವರು ನನಗೆ ಸಮಾಧಾನ ಮಾಡಿದ್ರು, ಕಾನೂನು ಮೇಲೆ ನಂಬಿಕೆಯಿದೆ ಎಂದರು. ಖಂಡಿತವಾಗಿಯೂ ಅವರು ಹೊರಗಡೆ ಬರುತ್ತಾರೆ. ಆ ದೇವರಲ್ಲಿ ಅಷ್ಟೇ ಬೇಡಿಕೊಳ್ಳುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಪವಿತ್ರಾ ಗೌಡಗೆ ಮುಂದುವರೆದ ಸೆರೆವಾಸ