Select Your Language

Notifications

webdunia
webdunia
webdunia
webdunia

ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾದ ಅಂಶಗಳಿಂದ ದರ್ಶನ್‌ ಎ1 ಆರೋಪಿಯಾಗುತ್ತಾರಾ

Renukaswamy Case

Sampriya

ಬೆಂಗಳೂರು , ಬುಧವಾರ, 21 ಆಗಸ್ಟ್ 2024 (20:44 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ತೀವ್ರ ತನಿಖೆ ಮಾಡಿರುವ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ಗೆ ಬಡ್ತಿ ನೀಡುವ ಸಾಧ್ಯತೆಯಿದೆ.

 ಹತ್ಯೆ ಪ್ರಕರಣದಲ್ಲಿರುವ ದರ್ಶನ್ ಅವರ ಪಾತ್ರವನ್ನು ತನಿಖೆ ಮಾಡಿದ ಪೊಲೀಸರು ಇದೀಗ ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಅವರನ್ನೇ ಎ1 ಆರೋಪಿಯನ್ನಾಗಿ ಮಾಡುತ್ತದಾ ಎಂದು ಎನ್ನಲಾಗಿದೆ. ಕೊಲೆ ಕೇಸಿನ ತನಿಖೆ ವೇಳೆ ಎ1 ಆರೋಪಿಯಾಗಿದ್ದ ಪವಿತ್ರಾ ಗೌಡ ಸ್ಥಾನಕ್ಕೆ ಇದೀಗ ದರ್ಶನ್ ಅವರಿಗೆ ನೀಡಿಲಿದೆಯಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಇದರಿಂದ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಇತ್ತ ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟ, ದೇವರ ಮೊರೆ ಹೋಗುತ್ತಿದ್ದಾರೆ. ಅತ್ತ ಕಡೆ ಹತ್ಯೆ ಪ್ರಕರಣದ ತನಿಖೆ ತೀವ್ರ ಚುರುಕುಮಾಡಿರುವ ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ವಶಪಡೆದು, ತನಿಖೆ ನಡೆಸುತ್ತಿದ್ದಾರೆ.

ಇನ್ನೂ ದರ್ಶನ್ ಅವರನ್ನು ಎ1 ಆರೋಪಿಯನ್ನಾಗಿ ಮಾಡಲು ಇರುವ ಬಲವಾದ ಕಾರಣಗಳು ಹೀಗಿವೆ.

* ರೇಣುಕಾಸ್ವಾಮಿ ಕಿಡ್ನ್ಯಾಪ್‌ಗೆ ಸೂಚನೆ
* ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಡೀಲ್
* ರೇಣುಕಾಸ್ವಾಮಿಯನ್ನು ಆರ್‌ಆರ್‌ ನಗರದ ಪಟ್ಟಣಗೆರೆಯ ಶೆಡ್‌ ಕರೆತಂದಿರುವುದು
* ಶೆಡ್‌ನಲ್ಲಿ ಹಲ್ಲೆ ಮಾಡಿರುವುದು
* ಸಾವು ಬಳಿಕ ಶವ ವಿಲೇವಾರಿಗೆ ಡೀಲ್
* ಶವ ವಿಲೇವಾರಿ ಮಾಡುವಂತೆ ಪ್ರದೋಷ್ ಗೆ 30 ಲಕ್ಷ ಹಣ ಕೊಟ್ಟಿದ್ದ ದರ್ಶನ್
* ಕೊಲೆ ನಡೆದ ಸ್ಥಳದ ಸಿಸಿಟಿವಿ ದೃಶ್ಯವಾಳಿ ಅಳಿಸಿ ಹಾಕಿ, ಸಾಕ್ಷ್ಯ ನಾಶ

ಈ ಎಲ್ಲ ಆಯಾಮಗಳಿಂದ ಇದೀಗ ಎ2 ಆರೋಪಿಯಾಗಿದ್ದ ದರ್ಶನ್‌ರನ್ನು ಎ1 ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಸಿರು ಸೀರೆಯುಟ್ಟು ಸೀಮಂತ ಮಾಡಿಕೊಂಡ ನೇಹಾ ಗೌಡಗೆ ದೃಷ್ಟಿ ತೆಗೆಯಿರಿ ಎಂದ ಅಭಿಮಾನಿಗಳು