Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಗೆ ಪೆನ್ ಡ್ರೈವ್ ಸ್ಟಾರ್ ಪ್ರಜ್ವಲ್ ರೇವಣ್ಣ ಎಂಟ್ರಿ ಕೊಡ್ತಾರಂತೆ

Prajwal Revanna

Sampriya

ಬೆಂಗಳೂರು , ಬುಧವಾರ, 21 ಆಗಸ್ಟ್ 2024 (14:28 IST)
Photo Courtesy X
ಬೆಂಗಳೂರು: ಈ ಬಾರಿಯ ಕನ್ನಡದ ಬಿಗ್‌ಬಾಸ್‌ ದಿನಾಂಕ ಘೋಷಣೆಗೂ ಮುನ್ನಾವೇ ದೊಡ್ಮನೆಗೆ ಎಂಟ್ರಿಯಾಗುವ ಸ್ಪರ್ಧಿಗಳ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. 10ಸೀಸನ್‌ ಅನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ ಕನ್ನಡದ ಕಿಚ್ವ ಸುದೀಪ್ ಅವರು 11ನೇ ಆವೃತ್ತಿಯನ್ನು ನಡೆಸಿಕೊಡಲಿದ್ದು, ಇದೀಗ ಬಿಗ್‌ಬಾಸ್‌ ಶುರುವಿಗೆ ದಿನಗಣನೆ ಆರಂಭವಾಗಿದೆ.

ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಿನಲ್ಲಿ ದೊಡ್ಮನೆ ಆಟ ಶುರುವಾಗಲಿದೆ ಎಂದು  ತಿಳಿದುಬಂದಿದೆ.

ಸಾಮಾನ್ಯವಾಗಿ ಬಿಗ್ ಬಾಸ್‌ ಮನೆಗೆ ಸೆಲೆಬ್ರಿಟಿಗಳ ಜತೆಗೆ ಕಿರುತೆರೆ ನಟಿಯರು,‌ ಸಾಮಾಜಿಕ ಮಾಧ್ಯಮದಲ್ಲಿ ಹವಾ ಸೃಷ್ಟಿಸಿದವರು ಎಂಟ್ರಿಯಾಗುತ್ತಾರೆ. ಜತೆಗೆ‌ ಬೇರೆ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಿರುವವನ್ನು ಬಿಗ್ ಬಾಸ್ ಮನೆಗೆ ಕರೆತರುತ್ತಾರೆ.

ಅದರಂತೆ ಈ ಬಾರಿಯೂ ಹಲವರ ಹೆಸರು ಮುಂಚೂಣಿಯಲ್ಲಿದ್ದು, ಅದರಲ್ಲಿ ಈಚೆಗೆ ಪೆನ್‌ಡ್ರೈವ್ ಪ್ರಕರಣದ ಮೂಲಕ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣರಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೇವಣ್ಣ ಅವರು ಈ ಬಾರಿಯ ಬಿಗ್‌ಬಾಸ್‌ ಎಂಟ್ರಿಯಾಗುತ್ತಾರೆಂಬ ಸುದ್ದಿಯಿದೆ. ಆದರೆ ಸದ್ಯ ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಸುದ್ದಿ ಎಷ್ಟು ನಿಜ ಎಂದು ಬಿಗ್‌ಬಾಸ್ ಶುರುವಾದಮೇಲೆ ಅಷ್ಟೇ ನಿಜಾಂಶ ಹೊರಬೀಳಲಿದೆ.

ಅದಲ್ಲದೆ ಖ್ಯಾತ ನಿರೂಪಕ ಅಜಿತ್ ಹನುಮಕ್ಕನವರ್ ಹೆಸರು ಕೂಡಾ ಒಡಾಡುತ್ತಿದೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು 'ಈ ಸುದ್ದಿ ಸತ್ಯ ಅಂತ ಎಷ್ಟು ಜನರಿಗೆ ಅನ್ನಿಸತ್ತೆ... ಸತ್ಯ ಆಗಿರ್ಲಿ ಅಂತ ಯಾರ್ಯಾರಿಗೆ ಅನ್ನಿಸುತ್ತೆ' ಎಂದು ಜನರ ಅಭಿಪ್ರಾಯ ಕೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾತ್ರವರ್ಗದ ಬಗ್ಗೆಯೂ ಸೀಕ್ರೆಟ್ ಬಿಟ್ಟುಕೊಡದೇ ಕಾಂತಾರ ನಾಲ್ಕನೇ ಹಂತದ ಶೂಟಿಂಗ್ ಗೆ ಬಂದು ನಿಂತ ರಿಷಬ್ ಶೆಟ್ಟಿ