Select Your Language

Notifications

webdunia
webdunia
webdunia
webdunia

ಅಣ್ಣ ಸೂರಜ್ ರೇವಣ್ಣನಿಗೆ ಸಿಕ್ಕ ಸವಲತ್ತು ತಮ್ಮ ಪ್ರಜ್ವಲ್ ಗೆ ಸಿಗಲಿಲ್ಲ

ಅಣ್ಣ ಸೂರಜ್ ರೇವಣ್ಣನಿಗೆ ಸಿಕ್ಕ ಸವಲತ್ತು ತಮ್ಮ ಪ್ರಜ್ವಲ್ ಗೆ ಸಿಗಲಿಲ್ಲ

Sampriya

ಬೆಂಗಳೂರು , ಬುಧವಾರ, 24 ಜುಲೈ 2024 (19:26 IST)
ಬೆಂಗಳೂರು: ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣ ಸಂಬಂಧ ಬಂಧಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.

ಪ್ರಜ್ವಲ್ ರೇವಣ್ಣ ಅವರು ಮೇಲೆ ದಾಖಲಾದ ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇನ್ನೂ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣ ಸಂಬಂಧ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ  ಸದ್ಯದ ಮಟ್ಟಿಗೆ ಜೈಲೇ ಗತಿಯಾಗಿದೆ.

ಪ್ರಜ್ವಲ್ ರೇವಣ್ಣ ಅವರ ಸಹೋದರ ಸೂರಜ್ ರೇವಣ್ಣ ಅವರಿಗೆ ಸೋಮವಾರ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ​ಷರತ್ತು ಬದ್ಧ ಜಾಮೀನು ನೀಡಲಾಗಿತ್ತು. ಅದರಂತೆ ಸೂರಜ್ ನಿನ್ನೆ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ವಾಪಾಸ್ಸಾಗಿದ್ದಾರೆ. ಇದರ ಖುಷಿಯಲ್ಲಿದ್ದ ಕುಟುಂಬ ಪ್ರಜ್ವಲ್‌ ರೇವಣ್ಣಗೂ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು, ಆದರೆ  ಅದೀಗ ಹುಸಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಪೆಡ್ಲರ್ ವಿಕಾಸ್ ಮೋದಿಯವರ 'ವಿಕಸಿತ ಭಾರತ'ದ ಕೊಡುಗೆಯೇ: ಕಾಂಗ್ರೆಸ್ ಪ್ರಶ್ನೆ