Select Your Language

Notifications

webdunia
webdunia
webdunia
webdunia

ಪ್ರಜ್ವಲ್‌ನನ್ನು ಮಾತನಾಡಿಸಲ್ಲ ಎಂದಿದ್ದ ರೇವಣ್ಣ ಇಂದು ದಿಢೀರ್‌ ಆಗಿ ಪರಪ್ಪನ ಅಗ್ರಹಾರಕ್ಕೆ ಭೇಟಿ

ಪ್ರಜ್ವಲ್‌ನನ್ನು ಮಾತನಾಡಿಸಲ್ಲ ಎಂದಿದ್ದ ರೇವಣ್ಣ ಇಂದು ದಿಢೀರ್‌ ಆಗಿ ಪರಪ್ಪನ ಅಗ್ರಹಾರಕ್ಕೆ ಭೇಟಿ

Sampriya

ಬೆಂಗಳೂರು , ಬುಧವಾರ, 3 ಜುಲೈ 2024 (15:48 IST)
ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮೊದಲ ಬಾರಿ ಅವರ ತಂದೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದಾರೆ.

 ಸೋಮವಾರ ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ ಮಗನನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದರು. ಇದೀಗ ತಾಯಿ ಭೇಟಿ ಬೆನ್ನಲ್ಲೇ ಮಗನನ್ನು ನೋಡಲು ತಂದೆ ಎಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ.

ಇನ್ನೂ ನಿನ್ನೆ ಮಾಧ್ಯಮದವರ ಜತೆ ಮಾತನಾಡಿದ್ದ ರೇವಣ್ಣ ಅವರು, ಮಗ ಪ್ರಜ್ವಲ್‌ರನ್ನು ನೋಡಲು ಜೈಲಿಗೆ ಹೀಗುವುದಿಲ್ಲ. ಒಂದು ವೇಳೆ ನಾನು ಭೇಟಿಯಾದರೆ ಅದಕ್ಕೆ ಇಲ್ಲಸಲ್ಲದನ್ನು ಸೇರಿಸಿ ಹೇಳುತ್ತಾರೆ. ಹೀಗಾಗಿ ನಾನು ಹೋಗಲ್ಲ ಎಂದಿದ್ದರು.

ಈ ಹೇಳಿಕೆ ನೀಡಿದ ಒಂದು ದಿನದ ಒಳಗೆಯೇ ಇದೀಗ ಮಗನನ್ನು ರೇವಣ್ಣ ಅವರು ಭೇಟಿಯಾಗಿದ್ದಾರೆ.  ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರಿಬ್ಬರು ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಹೊಳೇನರಸೀಪುರ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪ್ರಕರಣದ ದಾಖಲಿಸಿ, ಎಸ್‌ಐಟಿಗೆ ವರ್ಗಾಯಿಸಲಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಅಸ್ಸಾಂನಲ್ಲಿ ಮುಂದುವರೆದ ಪ್ರವಾಹ, ಇದುವರೆಗೆ 38 ಮಂದಿ ಸಾವು