Select Your Language

Notifications

webdunia
webdunia
webdunia
webdunia

ಸಣ್ಣ ಪ್ರಾಯದಲ್ಲೇ ಹೃದಯಾಘಾತಕ್ಕೆ ಬಲಿಯಾದ ಮಲಯಾಳಂನ ಖ್ಯಾತ ನಟ

Nirmal Benny No More

Sampriya

ಕೇರಳ , ಶುಕ್ರವಾರ, 23 ಆಗಸ್ಟ್ 2024 (19:40 IST)
Photo Courtesy X
ಮಲಯಾಳಂ ಖ್ಯಾತ ನಟ ನಿರ್ಮಲ್ ಬೆನ್ನಿ ಅವರು ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅವರ ಸ್ನೇಹಿತ ಸಂಜಯ್ ಪಡಿಯೂರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

37ವರ್ಷದ ಮಲಯಾಳಂ  ನಟ ನಿರ್ಮಲ್ ಬೆನ್ನಿ ಅವರಿಗೆ ಇಂದು ತಿರುವನಂತಪುರನಲ್ಲಿ ಹೃದಯಾಘಾತವಾಗಿ ಕೊನೆಯುಸಿರೆಳೆದರು. ಇವರು 'ಆಮೆನ್' ಚಿತ್ರದಲ್ಲಿನ ಪಾತ್ರಕ್ಕೆ ಹೆಚ್ಚು ಮನ್ನಣೆ ಪಡೆದಿದ್ದರು.

ಅವರು ಪೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ: ನನ್ನ ಆತ್ಮೀಯ ಗೆಳೆಯನಿಗೆ ವಿದಾಯ ಹೇಳುತ್ತಿದ್ದೇನೆ, 'ಆಮೆನ್'ನ ಕೊಚಚನ್ ಪಾತ್ರ ಮತ್ತು ನನ್ನ 'ದೂರಂ'ನಲ್ಲಿ ಅವರು ನಿರ್ವಹಿಸಿದ ಕೇಂದ್ರ ಪಾತ್ರ. ಇಂದು ಮುಂಜಾನೆ ಅವರು ಹೃದಯಾಘಾತದಿಂದ ನಿಧನರಾದರು. ನನ್ನ ಆತ್ಮೀಯ ಗೆಳೆಯನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಿರ್ಮಲ್ ಬೆನ್ನಿ, ಲಿಜೋ ಜೋಸ್ ಪೆಲ್ಲಿಸ್ಸೆರಿಯವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ *ಆಮೆನ್* ನಲ್ಲಿ ಕೊಚ್ಚಚನ್ (ಕಿರಿಯ ಪಾದ್ರಿ) ಪಾತ್ರಕ್ಕೆ ಭಾರೀ ಮೆಚ್ಚುಗೆ ಪಡೆದಿದ್ದರು. ಅವರು ತಮ್ಮ ಸಿನಿ ಬದುಕನ್ನು 2012ರ 'ನವಗಾಥರ್ಕ್ಕು ಸ್ವಾಗತಂ' ಸಿನಿಮಾದೊಂದಿಗೆ ಆರಂಭಿಸಿದರು. ಇದುವರೆಗೆ ಐದು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಜನಪ್ರಿಯ ಯೂಟ್ಯೂಬ್ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಿರ್ಮಲ್ ಅವರು ಡಿಜಿಟಲ್ ಜಗತ್ತಿನಲ್ಲಿ ತಮ್ಮ ಛಾಪನ್ನು ಬಿಟ್ಟಿದ್ದಾರೆ. ಅವರ ಅಕಾಲಿಕ ನಿಧನವು ಸಿನಿಮಾರಂಗದಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ಭಾರೀ ನೋವು ಉಂಟು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್‌ವುಡ್‌ಗೆ ಹೊಸ ನಿರೀಕ್ಷೆ ಹುಟ್ಟಿಸಿದ ಉಪೇಂದ್ರ ನಟನೆಯ 'ಯುಐ' ಸಿನಿಮಾದ ಬಿಜಿಎಂ