Select Your Language

Notifications

webdunia
webdunia
webdunia
webdunia

ಸ್ಯಾಂಡಲ್‌ವುಡ್‌ಗೆ ಹೊಸ ನಿರೀಕ್ಷೆ ಹುಟ್ಟಿಸಿದ ಉಪೇಂದ್ರ ನಟನೆಯ 'ಯುಐ' ಸಿನಿಮಾದ ಬಿಜಿಎಂ

Sound Of UI Cinema Music

Sampriya

ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2024 (19:26 IST)
Photo Courtesy X
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಸಿನಿಮಾದ ಸೌಂಡ್ ಆಫ್ ಯುಐ ಬಿಜಿಎಂ ಇಂದು ಬಿಡುಗಡೆಯಾಗಿದ್ದು, ಮೊದಲ ಝಲಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ವಿಡಿಯೋದಲ್ಲಿ ಉಪೇಂದ್ರ ಅವರು ಪ್ರಾಣಿಯ ಬೆನ್ನೇರಿ ಬರುತ್ತಿರುವುದನ್ನು ಕಾಣಬಹುದು. ಬಿ.ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದು, ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಓಂ, ಯುಐ, ಸೂಪರ್, ಎ, ಉಪೇಂದ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರಯೋಗಮುಖಿ ಸಿನಿಮಾದ ನೀಡಿದವರು ಉಪೇಂದ್ರ ಅವರು. ಇದೀಗ ಸೌಂಡ್ ಆಫ್ ಯುಐ ಮೂಲಕನೂ ಅಭಿಮಾನಿಗಳು ಹೊಸ ಭರವಸೆಯನ್ನು ಮೂಡಿಸಲಿದ್ದಾರೆ.

ಇದೀಗ ಈ ಸಿನಿಮಾದ ಬಿಜಿಎಂ ಕೂಡಾ ಹೊಸ ಕುತೂಹಲವನ್ನು ಮೂಡಿಸಿದೆ. ತಮ್ಮ ಫಸ್ಟ್‌ಲುಕ್, ಟೀಸರ್, ಪೋಸ್ಟರ್‌ಗಳ ಮೂಲಕ ಸಮ್‌ಥಿಂಗ್ ಡಿಫರೆಂಟ್ ಎಂಬ ಹುಳ ಬಿಟ್ಟಿದ್ದಾರೆ.

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಸೃಷ್ಟಿಸಿದ ಯುಐ ಸೌಂಡ್‌ ಆಫ್‌ ಮ್ಯಾಜಿಕ್‌ ಬಿಡುಗಡೆಯಾಗಿದೆ.  ಪೋಸ್ಟರ್‌ನಲ್ಲಿ ದೊಡ್ಡದೊಂದು ವಯೋಲಿನ್‌ ತೋರಿಸಿ "ಸೌಂಡ್‌ ಆಫ್‌ ಯುಐ" ನಿರೀಕ್ಷೆ ಹೆಚ್ಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೃತಧಾರೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್‌....ಜೈದೇವ್‌ ಮುಖವಾಡ ಕಳಚುವ ಹೊರಟ ಆನಂದ್‌ ಜೀವಕ್ಕೆ ಆಪತ್ತು