Select Your Language

Notifications

webdunia
webdunia
webdunia
webdunia

ಉಪೇಂದ್ರ UI ಸಿನಿಮಾ ಟೀಸರ್ ಲಾಂಚ್ ಮಾಡಲಿರುವ ಕಿಚ್ಚ ಸುದೀಪ್, ಶಿವಣ್ಣ

Upendra Shivaraj Kumar Kiccha Sudeep

Krishnaveni K

ಬೆಂಗಳೂರು , ಶನಿವಾರ, 6 ಜನವರಿ 2024 (11:21 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯುಐ ಸಿನಿಮಾದ ಟೀಸರ್ ಲಾಂಚ್ ಈವೆಂಟ್ ಇದೇ ಜನವರಿ 8 ರಂದು ನಡೆಯಲಿದೆ.

ಉಪೇಂದ್ರ ಬಹಳ ದಿನಗಳ ನಂತರ ನಿರ್ದೇಶಿಸಿರುವ ಸಿನಿಮಾವಿದು. ಹೀಗಾಗಿ ಉಪ್ಪಿ ಈ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಜನರ ಮುಂದೆಯೇ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಅದ್ಧೂರಿ ಕಾರ್ಯಕ್ರಮವನ್ನೂ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಉಪೇಂದ್ರ ಆಪ್ತರಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಮತ್ತು ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಕೂಡಾ ಆಗಮಿಸಲಿದ್ದಾರೆ.

ಲಹರಿ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಜನವರಿ 8 ರಂದು ಬೆಳಿಗ್ಗೆ 11 ಗಂಟೆಗೆ ಟೀಸರ್ ಲಾಂಚ್ ಆಗಲಿದೆ. ಇದನ್ನು ಕಿಚ್ಚ ಸುದೀಪ್ ನಿರ್ವಹಿಸಲಿದ್ದಾರೆ.

ಈ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೂ ಸುದೀಪ್, ಶಿವಣ್ಣ ಬಂದಿದ್ದರು. ಇದೀಗ ಟೀಸರ್ ಲಾಂಚ್ ವೇಳೆಯೂ ಈ ದಿಗ್ಗಜ ನಟರು ಆಗಮಿಸುತ್ತಿದ್ದಾರೆ. ಯುಐ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BBK10: ಬಿಗ್ ಬಾಸ್ ಮನೆಗೆ ಮರಳಿದ ಡ್ರೋಣ್ ಪ್ರತಾಪ್