Publish Date: Fri, 23 Aug 2024 (18:27 IST)
Updated Date: Fri, 23 Aug 2024 (18:33 IST)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪ್ರೇಕ್ಷಕರ ಮನಸ್ಸು ತಲುಪಿ ಟಾಪ್ ರೇಟಿಂಗ್‌ನಲ್ಲಿ ಮುನ್ನುಗ್ಗುತ್ತಿದೆ.
ಇದೀಗ ಜೈದೇವ್ ಅಸಲಿಯತ್ತು ಬಯಲಾಗುವ ಹೊತ್ತಿಗೆಯೇ ಗೌತಮ್ ಸ್ನೇಹಿತ ಆನಂದ್ ಆಪತ್ತಿಗೆ ಸಿಲುಕ್ಕಿದ್ದಾನೆ. ಜೀವದ ಗೆಳೆಯ ಆನಂದ್ ಸ್ಥಿತಿ ಕೇಳಿ ಗೌತಮ್ ಶಾಕ್ ಆಗಿ, ಆಸ್ಪತ್ರೆಗೆ ದೌಡಾಯಿಸಿದ್ದಾನೆ.
ತಾನೂ ಇಷ್ಟ ಪಟ್ಟು ಮದುವೆಯಾಗಬೇಕೆಂದಿದ್ದ ಹುಡುಗಿ ಅಪೇಕ್ಷಾ ತನ್ನ ತಮ್ಮ ಪಾರ್ಥನನ್ನು ಮದುವೆಯಾಗುವುದನ್ನು ಸಹಿಸಕ್ಕಾಗದೆ ಅವರ ಹತ್ಯೆಗೆ ಅಣ್ಣ ಜೈದೇವ್ ಸುಪಾರಿ ಕೊಟ್ಟಿರುವುದು ಆನಂದ್‌ಗೆ ತಿಳಿದಿದೆ.
ಇನ್ನೂ ತನ್ನ ಮುಖವಾಡ ಬಯಲಾಗುವ ಭಯಕ್ಕೆ ಜೈದೇವ್ ಆನಂದ್ ಪ್ರಾಣಕ್ಕೆ ಸಂಚಕಾರ ತಂದಿದ್ದಾನೆ. ಜೈದೇವ್ ಮುಖವಾಡವನ್ನು ಬಯಲು ಮಾಡಲು ಹೊರಟ ಆನಂದ್ ಅಪಘಾತವಾಗಿದೆ. ತಲೆಗೆ ಗಂಭೀರವಾದ ಪೆಟ್ಟಾಗಿದೆ. ಸದ್ಯ ಸೀರಿಯಲ್ ತುಂಬಾನೇ ಇಂಟ್ರೆಸ್ಟಿಂಗ್ ಆಗಿ ಮುಂದುವರೆದಿದೆ. ಇನ್ನೂ ಮದುವೆಯಾಗಿ ಕಾಲಿಟ್ಟಿರುವ ಅಪೇಕ್ಷಾ ವರ್ತನೆಯಿಂದ ಭೂಮಿಕಾ ಬೇಸರಗೊಂಡಿದ್ದಾಳೆ. ಆದರೆ ಈ ವಿಚಾರ ಗೌತಮ್ ದಿವಾನ್‌ಗೆ ಮಾತ್ರ ತಿಳಿದಿಲ್ಲ.