Select Your Language

Notifications

webdunia
webdunia
webdunia
webdunia

ತರುಣ್ ಸುಧೀರ್ ಗೆ ಸೋನಲ್ ಸಿಕ್ಕಿದ್ದು ಯಾವ ಪರಿಸ್ಥಿತಿಯಲ್ಲಿ ಬಯಲಾಯ್ತು ಸತ್ಯ

Tharun Sudhir-Sonal Monterio

Krishnaveni K

ಬೆಂಗಳೂರು , ಶುಕ್ರವಾರ, 30 ಆಗಸ್ಟ್ 2024 (10:50 IST)
ಬೆಂಗಳೂರು: ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಜೋಡಿ. ಈ ಜೋಡಿಯ ಮೊದಲ ಭೇಟಿ ಎಲ್ಲಾಗಿತ್ತು ಎಂಬುದನ್ನು ಅವರೇ ಈಗ ಬಹಿರಂಗಪಡಿಸಿದ್ದಾರೆ.

ಆಂಕರ್ ಅನುಶ್ರೀ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ತರುಣ್ ಮತ್ತು ಸೋನಲ್ ಮತ್ತು ಪ್ರೇಮ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ಅನುಶ್ರೀ ಇವರಿಬ್ಬರಿಗೂ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ವೇಳೆ ನೀವಿಬ್ಬರೂ ನಿಜವಾಗಿ ಮೊದಲು ಭೇಟಿಯಾಗಿದ್ದು ಎಲ್ಲಿ ಎಂದು ಕೇಳಿದ್ದಾರೆ.

ಆಗ ತರುಣ್ ತಾವು ಮೊದಲು ಸೋನಲ್ ಭೇಟಿಯಾಗಿದ್ದು ಯಾವ ಪರಿಸ್ಥಿತಿಯಲ್ಲಿ ಎಂದು ವಿವರಿಸಿದ್ದಾರೆ. ಆಗಿನ್ನೂ ಸೋನಲ್ ಪಂಚತಂತ್ರ ಸಿನಿಮಾ ಕೂಡಾ ಮಾಡಿರಲಿಲ್ಲ. ಎರಡು ತುಳು ಸಿನಿಮಾ ಮಾಡಿ ಇನ್ನೇನು ಸ್ಯಾಂಡಲ್ ವುಡ್ ನಲ್ಲಿ ಅವಕಾಶಕ್ಕಾಗಿ ಎದಿರು ನೋಡುತ್ತಿದ್ದರು.

ಸೋನಲ್ ಮೊದಲು ಇದ್ದಿದ್ದ ಮನೆಯಲ್ಲಿ ಮೊದಲು ಹಾಸ್ಯ ನಟ ಚಿಕ್ಕಣ್ಣ ಇದ್ದರಂತೆ. ಬಳಿಕ ಚಿಕ್ಕಣ್ಣ ಮನೆ ಖಾಲಿ ಮಾಡಿದ ಮೇಲೆ ಸೋನಲ್ ಅದೇ ಮನೆಗೆ ತಮ್ಮ ತಾಯಿ ಜೊತೆ ಬಂದು ವಾಸ್ತವ್ಯ ಹೂಡಿದ್ದಾರೆ. ಒಂದು ದಿನ ಚಿಕ್ಕಣ್ಣನನ್ನು ನೋಡಲು ತರುಣ್ ಆ ಮನೆಗೆ ಬಂದಿದ್ದಾರೆ. ಅಲ್ಲಿಂದ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಅತ್ತಿತ್ತ ನೋಡುತ್ತಿದ್ದಾಗ ತಮ್ಮ ತಾಯಿ ಮತ್ತು ಮುದ್ದಿನ ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದ ಸೋನಲ್ ಚಿಕ್ಕಣ್ಣ ಮನೆ ವಿಳಾಸ ಹೇಳಿದರಂತೆ. ಯಾಕೆಂದರೆ ಚಿಕ್ಕಣ್ಣ ಪಕ್ಕದ ಬೀದಿಯಲ್ಲೇ ಮನೆ ಮಾಡಿದ್ದರು.

ಚಿಕ್ಕಣ್ಣ ವಿಳಾಸ ಕೊಟ್ಟಿದ್ದಕ್ಕೆ ಸೋನಲ್ ಗೆ ಥ್ಯಾಂಕ್ಸ್ ಹೇಳಿ ತರುಣ್ ಮುಂದೆ ಸಾಗಿದ್ದರಂತೆ. ಆಗ ತರುಣ್ ಯಾರು ಎಂಬುದು ಸೋನಲ್ ಗೆ ಗೊತ್ತಿತ್ತು. ಆದರೆ ಸೋನಲ್ ಇನ್ನೂ ಚಿತ್ರರಂಗಕ್ಕೆ ಪರಿಚಯವಾಗಿಲ್ಲದೇ ಇರುವುದರಿಂದ ಅವರು ಯಾರು ಎಂದು ತರುಣ್ ಗೆ ಗೊತ್ತಾಗಲಿಲ್ಲ. ಆದರೆ ಅಂದು ಮಾರ್ಗ ತೋರಿಸಿದ ಹುಡುಗಿಯೇ ಇಂದು ಜೀವನದಲ್ಲಿ ಕೈ ಹಿಡಿದು ನಡೆಯಲು ಬಂದಿದ್ದಾಳೆ ಎಂದು ತರುಣ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಜೈಲಿನಲ್ಲಿ ಹೇಗಿತ್ತು ದರ್ಶನ್ ದಿನಚರಿ