Publish Date: Thu, 29 Aug 2024 (20:02 IST)
Updated Date: Fri, 30 Aug 2024 (10:44 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಎರಡು ತಿಂಗಳ ಬಳಿಕ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ.
ರಾಜಾತಿಥ್ಯ ಹಿನ್ನೆಲೆ ದರ್ಶನ್ ಅವರನ್ನು ಇಂದು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನೂ ದರ್ಶನ್ ಅವರು ಬರುವ ಹಿನ್ನೆಲೆ ಜೈಲಿನ ಸುತ್ತಾ ಮುತ್ತಾ ಅವರ ಅಭಿಮಾನಿಗಳು ಜಮಾಯಿಸಿದ್ದರು. ಅದಲ್ಲದೆ ದರ್ಶನ್ ಇದ್ದ ವಾಹನ ಜೈಲಿನತ್ತ ಆಗಮಿಸುತ್ತಿದ್ದ ಹಾಗೇ ಅಭಿಮಾಗಳು ಜೈಕಾರ ಹಾಕಿದ್ದಾರೆ.
ಪೊಲೀಸ್ ವಾಹನದಲ್ಲಿ ಬಂದ ದರ್ಶನ್ ಅವರು ಕೂಲಿಂಗ್ ಗ್ಲಾಸ್ ಧರಿಸಿ, ಬ್ರಾಂಡೆಟ್ ಟೀ ಶರ್ಟ್‌ನಲ್ಲಿ ಬಳ್ಳಾರಿ ಜೈಲಿಗೆ ಎಂಟ್ರಿಕೊಟ್ಟಿದ್ದಾರೆ.
ಇದೀಗ ದರ್ಶನ್ ಅವರ ಧರಿಸಿದ್ದ ಟೀ ಶರ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಅವರು ಧರಿಸಿದ್ದ ಟೀ ಶರ್ಟ್‌ನಲ್ಲಿ ನ್ಯಾಯ, ಘನತೆ, ಸಮಾನತೆ, ಶಾಂತಿ ಎಂದು ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಬಾಸ್ ಟಿ ಶರ್ಟ್ ಟ್ರೆಂಡಿಂಗ್ ಕಣ್ರೋ ಎಂದು ಬರೆದುಕೊಂಡಿದ್ದಾರೆ. ಆದರೆ ಇದೆಷ್ಟೂ ನಿಜ ಅಂತಾ ತಿಳಿದುಬರಬೇಕಿದೆ ಅಷ್ಟೇ.
ಇನ್ನೊಂದೆಡೆ ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪದಗಳ ಮೂಲಕ ಹೇಳಿಕೊಂಡಿದ್ದಾರಾ ಎಂದು ಚರ್ಚೆಗಳು ನಡೆಯುತ್ತಿದೆ.