Select Your Language

Notifications

webdunia
webdunia
webdunia
webdunia

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್, ಆದ್ರೆ ಪತ್ನಿ ವಿಜಯಲಕ್ಷ್ಮೀಗೆ ಹೆಚ್ಚಾಯಿತು ಮತ್ತಷ್ಟು ಸಂಕಷ್ಟ

Vijayalakshmi Darshan

Sampriya

ಬೆಂಗಳೂರು , ಗುರುವಾರ, 29 ಆಗಸ್ಟ್ 2024 (18:31 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಹೊರತರಲು ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅದಲ್ಲದೆ ಈ ಪ್ರಕರಣದಿಂದ ದರ್ಶನ್ ಅವರನ್ನು ಪಾರು ಮಾಡುವಂತೆ ದೇವರ ಮೊರೆ ಕೂಡ ಹೋಗಿದ್ದಾರೆ. ಇನ್ನೇನು ಈ ಪ್ರಕರಣದಲ್ಲಿ ದರ್ಶನ್ ಅವರು ಇನ್ನೇನು ಹೊರಬರಬಹುದು ಎನ್ನುಷ್ಟರಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಲಾಗಿದೆ.

ದರ್ಶನ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎಂಬ ಪೋಟೋ ವೈರಲ್ ಆದ ಬೆನ್ನಲ್ಲೇ ಅವರನ್ನು ಇಂದು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ಪ್ರತಿ ಸೋಮವಾರದಂದು ದರ್ಶನ್ ಭೇಟಿಗೆ ಬರುತ್ತಿದ್ದ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್‌ಗೆ ಮತ್ತಷ್ಟು ಸಮಸ್ಯೆಯಾಗಿದೆ.

ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಪ್ರತಿ ಸೋಮವಾರ ದರ್ಶನ್‌ರನ್ನು ಭೇಟಿಯಾಗುತ್ತಿದ್ದ ವಿಜಯಲಕ್ಷ್ಮೀ ಅವರು ಕಾನೂನಿನ ಹೋರಾಟ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಇನ್ನೂ ಮಗ ವಿನೀಶ್ ಕೂಡಾ ಅಮ್ಮನೊಂದಿಗೆ ಆಗಾಗ ಜೈಲಿಗೆ ಬಂದು ಅಪ್ಪನ ಜತೆ ಮಾತನಾಡುತ್ತಿದ್ದ. ಆದರೆ ಇದೀಗ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಿರುವುದರಿಂದ ವಿಜಯಲಕ್ಷ್ಮೀ ಅವರಿಗೆ ಬಳ್ಳಾರಿಗೆ ಪ್ರಯಾಣಿಸುವುದೇ ಸವಾಲಾಗಿದೆ.

ವಾರಕ್ಕೆರಡು ಬಾರಿ ಅಪ್ ಅಂಡ್ ಡೌನ್ ಸಾವಿರ ಕಿ.ಮೀಟರ್ ಓಡಾಡಬೇಕಾಗುತ್ತದೆ. ಸುಮಾರು 11 ಗಂಟೆಗಳ ಜರ್ನಿಯೂ ಬೇಕಾಗುತ್ತದೆ. ಇವೆಲ್ಲದರ ನಡುವೆ ಪತಿಯನ್ನು ಜೈಲಿನಿಂದ ಬಿಡಿಸಲು ಲಾಯರ್ ಸಂಪರ್ಕ, ಕೋರ್ಟು ಕಛೇರಿ ಅಂತ ಅಲೆದಾಡೋ ಪರಿಸ್ಥಿತಿಯೂ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ನವಜಾತಶಿಶು ಸೇರಿದಂತೆ 9ಮಂದಿಯನ್ನು ಬಲಿ ಪಡೆದ ತೋಳ ಕೊನೆಗೂ ಸೆರೆ