Publish Date: Fri, 30 Aug 2024 (10:15 IST)
Updated Date: Fri, 30 Aug 2024 (10:18 IST)
ಬಳ್ಳಾರಿ: ಪರಪ್ಪನ ಅಗ್ರಹಾರದಿಂದ ನಿನ್ನೆಯಷ್ಟೇ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ನಟ ದರ್ಶನ್ ಹೊ ಜೈಲಿಗೆ ಬಂದ ಮೇಲೆ ದಿನಚರಿ ಹೇಗಿತ್ತು ಎಂಬ ವಿವರ ಇಲ್ಲಿದೆ ನೋಡಿ.
ದರ್ಶನ್ ನಿನ್ನೆ ಬೆಳಿಗ್ಗೆ ಬಳ್ಳಾರಿ ಜೈಲಿಗೆ ಬಂದಿದ್ದರು. ಬೆಳಗ್ಗಿನ ಉಪಾಹರವನ್ನು ಅವರು ಸ್ವೀಕರಿಸಿರಲಿಲ್ಲ. ಮಧ್ಯಾಹ್ನವೂ ಅವರು ಊಟ ಮಾಡಿರಲಿಲ್ಲ. ಆದರೆ ಸಂಜೆ 6 ಗಂಟೆಗೆ ನೀಡುವ ಆಹಾರವನ್ನು 4.30 ಕ್ಕೇ ಸೇವಿಸಿ ತಮ್ಮ ಕೊಠಡಿ ಸೇರಿಕೊಂಡಿದ್ದಾರೆ. 6 ಗಂಟೆಗೆ ಅವರ ಬ್ಯಾರಕ್ ಬಾಗಿಲು ಬಂದ್ ಮಾಡಲಾಗುತ್ತದೆ.
ರಾತ್ರಿಯಿಡೀ ನಿದ್ರೆಯಿಲ್ಲದೇ ದರ್ಶನ್ ಕಳೆದಿದ್ದಾರೆ ಎಂದು ತಿಳಿದುಬಂದಿದೆ. ಹೊಸ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅವರು ಕಷ್ಟಪಟ್ಟಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ರೌಡಿಗಳ ಕೃಪೆಯಿಂದ ರಾಜಾತಿಥ್ಯ ಸಿಗುತ್ತಿತ್ತು. ಆದರೆ ಇಲ್ಲಿ ಕಟ್ಟುನಿಟ್ಟಾಗಿ ಜೈಲು ನಿಯಮ ಪಾಲಿಸಲು ಹಿರಿಯ ಅಧಿಕಾರಿಗಳೇ ಸೂಚನೆ ನೀಡಿದ್ದಾರೆ.
ಜೈಲಿನ ಅಧಿಕಾರಿಗಳಿಗೂ ಯಾವುದೇ ಉಪಕಾರ ಮಾಡುವಂತಿಲ್ಲ. ಮಾಡಿದರೆ ನಿಮ್ಮ ತಲೆದಂಡವಾಗಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸದ್ಯಕ್ಕಂತೂ ಅವರು ಜೈಲು ನಿಯಮವನ್ನೇ ಪಾಲಿಸಬೇಕಾಗುತ್ತದೆ. ಅಲ್ಲಿ ಕೊಡುವ ಆಹಾರವನ್ನೇ ಸೇವಿಸಬೇಕಾಗುತ್ತದೆ. ಇಂದು ಬೆಳಿಗ್ಗೆ ಉಪ್ಪಿಟ್ಟು ಸೇವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.