Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮೂವರಿಗೆ ಜಾಮೀನು: ದರ್ಶನ್ ಫ್ಯಾನ್ಸ್ ಗೆ ಖುಷಿ

Darshan

Krishnaveni K

ಬೆಂಗಳೂರು , ಸೋಮವಾರ, 23 ಸೆಪ್ಟಂಬರ್ 2024 (16:55 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿದ್ದ 17 ಆರೋಪಿಗಳ ಪೈಕಿ ಈಗ ಮೂವರಿಗೆ ಜಾಮೀನು ಮಂಜೂರಾಗಿದ್ದು, ದರ್ಶನ್ ಫ್ಯಾನ್ಸ್ ಗೆ ಕೊಂಚ ಭರವಸೆ ಮೂಡಿದೆ.

ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿತ್ತು. ಎಲ್ಲರೂ ಈಗ ಬೇರೆ ಬೇರೆ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪೈಕಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಪ್ರಕರಣದ ಎ15, ಎ16 ಮತ್ತು ಎ17 ಆರೋಪಿಗಳಿಗೆ ಜಾಮೀನು ನೀಡಲಾಗಿದೆ.

ಎ15 ಕಾರ್ತಿಕ್, ಎ17 ನಿಖಿಲ್ ನಾಯಕ್ ಮತ್ತು ಎ16 ಕೇಶವಮೂರ್ತಿಗೆ ಜಾಮೀನು ನೀಡಲಾಗಿದೆ. ಈ ಮೂವರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ. ಇವರು ಪೊಲೀಸ್ ಠಾಣೆಗೆ ತೆರಳಿ ಸರೆಂಡರ್ ಆಗಲು ಹೊರಟಿದ್ದವರು. ಹಣ ನೀಡಿ ಇವರನ್ನು ಸರೆಂಡರ್ ಮಾಡಿಸಲು ಪ್ಲ್ಯಾನ್ ಮಾಡಲಾಗಿತ್ತು.

ಇವರ ಮೇಲೆ ಸಾಕ್ಷ್ಯ ನಾಶ ಸೆಕ್ಷನ್ ನಲ್ಲಿ ಕೇಸ್ ದಾಖಲಿಸಲಾಗಿತ್ತು. ಇದು ಜಾಮೀನು ರಹಿತ ಪ್ರಕರಣವೇನೂ ಅಲ್ಲ. ಹೀಗಾಗಿ ಈಗ ಈ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ಪ್ರತಿ ಜೈಲಿಗೆ ತಲುಪಿದ ತಕ್ಷಣವೇ ಇವರು ಬಿಡುಗಡೆಯಾಗಲಿದ್ದಾರೆ. ಒಂದೆಡೆ ಈ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ಇತ್ತ ದರ್ಶನ್ ಅಭಿಮಾನಿಗಳಲ್ಲೂ ಭರವಸೆ ಮೂಡಿದೆ. ತಮ್ಮ ಬಾಸ್ ಗೂ ಮುಂದೆ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಜಾಮೀನು ಅರ್ಜಿ ಕತೆ ಏನಾಯ್ತು, ಕೋರ್ಟ್ ಕಲಾಪದ ವಿವರ ಇಲ್ಲಿದೆ