Publish Date: Mon, 23 Sep 2024 (20:37 IST)
Updated Date: Mon, 23 Sep 2024 (20:39 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನು ಸಿಗಬಹುದೆಂಬ ಭರವಸೆಯಲ್ಲಿದ್ದ ನಟ ದರ್ಶನ್ ಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಅದೇನು ಇಲ್ಲಿ ನೋಡಿ.
ಇಷ್ಟು ದಿನ ಹತ್ಯೆ ಕೇಸ್ ನಲ್ಲಿ ಅವರ ವಿರುದ್ಧ ಸಾಕಷ್ಟು ತನಿಖೆಗಳಾಗಿವೆ. ಈ ವೇಳೆ ಅವರ ಹಣಕಾಸಿನ ವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಮ್ಮ ಮೇಲೆ ಹತ್ಯೆ ಪ್ರಕರಣ ದಾಖಲಾಗದಂತೆ ಸುಮಾರು 80 ಲಕ್ಷ ರೂ.ಗಳನ್ನು ದರ್ಶನ್ ವ್ಯಯಿಸಿದ್ದರು. ಈ ಹಣದ ಮೂಲದ ಬಗ್ಗೆ ಈಗ ತನಿಖೆ ನಡೆಯುವ ಸಾಧ್ಯತೆಯಿದೆ.
ಈ ಹಿನ್ನಲೆಯಲ್ಲಿ ದರ್ಶನ್ ನಿವಾಸಕ್ಕೆ ಐಟಿ ದಾಳಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ಹೊರಬೀಳದಂತೆ ದರ್ಶನ್ ವೆಚ್ಚ ಮಾಡಿರುವ ಹಣದ ಮೂಲ ಯಾವುದು ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರು ಈಗ ಐಟಿ ಅಧಿಕಾರಿಗಳಿಗೆ ಸೂಚನೆ ನೀಡುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳು ಬಂಧಿತರಾಗಿದ್ದಾರೆ. ಈ ಪೈಕಿ ಮೂವರು ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ಕೂಡಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಹತ್ಯೆ ಕೇಸ್ ನಲ್ಲಿ ದರ್ಶನ್ ವಿರುದ್ಧ ಜಾಮೀನು ಸಿಗಬಹುದು ಎಂದು ಭರವಸೆಯಲ್ಲಿದ್ದಾಗಲೇ ಐಟಿ ಸಂಕಷ್ಟ ಎದುರಾಗುವ ಶಾಕ್ ಸಿಕ್ಕಿದೆ.