Select Your Language

Notifications

webdunia
webdunia
webdunia
webdunia

ದರ್ಶನ್ ನಂಬಿ ಹೋಗಿ ಕೈಗೆ ಚೊಂಬು: ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ

Renukaswamy

Krishnaveni K

ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2024 (09:42 IST)
ಬೆಂಗಳೂರು: ರೇಣಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ನಂಬಿ ಹೋದ ಕೆಲವು ಆರೋಪಿಗಳಿಗೆ ಚೊಂಬೇ ಗತಿಯಾಗಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಬೇಲ್ ಆಗಿದ್ದರೂ ಬಿಡುಗಡೆ ಭಾಗ್ಯವಿಲ್ಲ ಎಂಬಂತಾಗಿದೆ. ಅದಕ್ಕೆ ಕಾರಣವೇನು ಇಲ್ಲಿ ನೋಡಿ.

ರೇಣುಕಾಸ್ವಾಮಿ ಮರ್ಡರ್ ಬಳಿಕ ಶವ ಸಾಗಣೆ ಮತ್ತು ತಾವೇ ಕೊಲೆ ಮಾಡಿದ್ದಾಗಿ ಸುಳ್ಳು ಕಂಪ್ಲೇಂಟ್ ಕೊಡಲು ಹೋಗಿದ್ದ ನಿಖಿಲ್ ನಾಯಕ್, ಕೇಶವಮೂರ್ತಿ ಮತ್ತು ಕಾರ್ತಿಕ್ ಗೆ ಜಾಮೀನು ಮಂಜೂರು ಮಾಡಿ ವಾರವಾಗುತ್ತಾ ಬಂದಿದೆ. ಆದರೆ ಮೂವರೂ ಇನ್ನೂ ಬಿಡುಗಡೆಯಾಗಿಲ್ಲ.

ಈ ಮೂವರೂ 5 ಲಕ್ಷ ರೂ. ಹಣದಾಸೆಗೆ ಕೊಲೆ ಆಪಾದನೆ ಹೊತ್ತುಕೊಳ್ಳಲು ಹೋದವರು. ನೇರವಾಗಿ ಕೊಲೆಯಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಮೂವರಿಗೆ ಜಾಮೀನು ನೀಡಲಾಗಿದೆ. ಆದರೆ ಜಾಮೀನಿಗೆ ಶ್ಯೂರಿಟಿ ಕೊಡಲೂ ಗತಿಯಿಲ್ಲ ಎಂಬಂತಾಗಿದೆ ಇವರ ಸ್ಥಿತಿ.

ಶ್ಯೂರಿಟಿ ಕೊಡುವವರು ಇಲ್ಲದೇ ಈ ಮೂವರೂ ಇನ್ನೂ ಜಾಮೀನು ಸಿಕ್ಕರೂ ಜೈಲಿನಿಂದ ಬಿಡುಗಡೆಯಾಗಿಲ್ಲ. ಶ್ಯೂರಿಟಿ ಸಿಕ್ಕಬಳಿಕವಷ್ಟೇ ಜೈಲು ಅಧಿಕಾರಿಗಳಿಗೆ ಅಧಿಕೃತವಾಗಿ ನ್ಯಾಯಾಲಯದ ಆದೇಶ ಸಿಕ್ಕಿ ಮೂವರು ಬಿಡುಗಡೆಯಾಗಬೇಕಿದೆ. ಅಲ್ಲಿಯವರೆಗೆ ಈ ಮೂವರೂ ತುಮಕೂರು ಜೈಲಿನಲ್ಲಿ ಮುದ್ದೆ ಮುರಿಯುವುದು ಅನಿವಾರ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್, ಪವಿತ್ರಾ ಗೌಡಗೆ ಮಹತ್ವದ ದಿನ: ಹೆಲಿಕಾಪ್ಟರ್ ಬುಕ್ ಮಾಡಿರೋದು ವೇಸ್ಟ್ ಆಗುತ್ತಾ