ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾವೆಲ್ಲಾ ಸ್ಪರ್ಧಿಗಳಿರಲಿದ್ದಾರೆ ಎಂಬ ಬಗ್ಗೆ ವಾಹಿನಿ ಈಗಾಗಲೇ ಸುಳಿವು ಕೊಟ್ಟಿದೆ. ಈ ಪೈಕಿ ನಟಿ ಹರಿಪ್ರಿಯಾ ಹೆಸರು ಕೇಳಿಬಂದಿತ್ತು.
ಇದಕ್ಕೆ ಕಾರಣವೂ ಇದೆ. ಮೊನ್ನೆಯಷ್ಟೇ ಕಲರ್ಸ್ ವಾಹಿನಿ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಿರಲಿದ್ದಾರೆ ಎಂದು ಕೆಲವು ಬ್ಲರ್ ಆಗಿರುವ ಫೋಟೋ ಪ್ರಕಟಿಸಿತ್ತು. ಈ ಫೋಟೋಗಳ ಪೈಕಿ ಒಂದು ಫೋಟೋದಲ್ಲಿರುವುದು ಹರಿಪ್ರಿಯಾರನ್ನೇ ಹೋಲುತ್ತಿತ್ತು. ಹೀಗಾಗಿ ಅವರು ಬಿಗ್ ಬಾಸ್ ಗೆ ಹೋಗುತ್ತಾರೆ ಎಂದು ಸುದ್ದಿಯಾಗಿತ್ತು.
ಇದರ ಬೆನ್ನಲ್ಲೇ ನಿನ್ನೆ ಪತಿ ವಸಿಷ್ಠ ಸಿಂಹ ಜೊತೆ ಕುಳಿತು ಹರಿಪ್ರಿಯಾ ಬಣ್ಣ ಹಚ್ಚುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಆ ಮೂಲಕ ಅವರು ಕಲರ್ಸ್ ವಾಹಿನಿಯ ಬಿಗ್ ಬಾಸ್ ಗೆ ಹೋಗುವ ಸುಳಿವು ನೀಡುತ್ತಿದ್ದಾರೇನೋ ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ಎಲ್ಲರ ಅನುಮಾನಗಳಿಗೆ ಅವರೇ ಉತ್ತರ ನೀಡಿದ್ದಾರೆ. ಕೆಲವು ನೆಟ್ಟಿಗರು ನೀವು ಬಿಗ್ ಬಾಸ್ ಗೆ ಹೋಗ್ತೀರಾ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರಿಪ್ರಿಯಾ ನೋ ವೇ ಚಾನ್ಸೇ ಇಲ್ಲ ಎಂದಿದ್ದಾರೆ. ಬಿಗ್ ಬಾಸ್ ಗೆ ಹೋಗ್ಬೇಡಿ ಮೇಡಂ ಎಂದವರಿಗೆ ಥಮ್ಸ್ ಅಪ್ ಮಾಡಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.